alex Certify ಈ ಅಗ್ಗದ ಬೈಕ್ ಖರೀದಿಸಿದ್ದಾರೆ ಮಹೇಂದ್ರ ಸಿಂಗ್‌ ಧೋನಿ; ಅದರಲ್ಲೇನಿದೆ ಅಂಥಾ ವಿಶೇಷತೆ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅಗ್ಗದ ಬೈಕ್ ಖರೀದಿಸಿದ್ದಾರೆ ಮಹೇಂದ್ರ ಸಿಂಗ್‌ ಧೋನಿ; ಅದರಲ್ಲೇನಿದೆ ಅಂಥಾ ವಿಶೇಷತೆ ಗೊತ್ತಾ ?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್‌ಗಳೆಂದ್ರೆ ಅಚ್ಚುಮೆಚ್ಚು. ಬಹುತೇಕ ದುಬಾರಿ ಬೈಕ್‌ ಮತ್ತು ಕಾರುಗಳ ಸಂಗ್ರಹವೇ ಧೋನಿ ಬಳಿಯಿದೆ. ಇದೀಗ ಮತ್ತೊಂದು ಹೊಸ ಬೈಕ್‌ ಆ ಲಿಸ್ಟ್‌ಗೆ ಸೇರ್ಪಡೆಯಾಗಿದೆ. ಧೋನಿ ಈ ಬಾರಿ ಅಗ್ಗದ ಬೈಕ್‌ ಖರೀದಿಸಿದ್ದಾರೆ. ಟಿವಿಎಸ್ ರೋನಿನ್ ಬೈಕ್‌ನ ಬೆಲೆ ಕಡಿಮೆಯಾದ್ರೂ ಪರ್ಫಾರ್ಮೆನ್ಸ್‌ ಸಖತ್ತಾಗಿದೆ.

ಟಿವಿಎಸ್‌ ರೋನಿನ್‌ ಬೈಕಿನ ಬೆಲೆ 1.49 ಲಕ್ಷ ರೂಪಾಯಿಯಿಂದ ಆರಂಭ. ಈ ಬೈಕ್ ಅನ್ನು ಕಳೆದ ವರ್ಷವೇ ಬಿಡುಗಡೆ ಮಾಡಲಾಗಿದೆ. ಧೋನಿ ಬಳಿ 30 ಲಕ್ಷ ಮೌಲ್ಯದ ಬೈಕ್ ಕೂಡ ಇದೆ. ಆ ಬೈಕ್‌ನ ಹೆಸರು ಕಾನ್ಫೆಡರೇಟ್ ಹೆಲ್‌ಕ್ಯಾಟ್ ಎಕ್ಸ್132. ಧೋನಿ ಹೊಸ ಬೈಕ್‌ ಖರೀದಿಸಿರುವ ಫೋಟೋವನ್ನು ಕಂಪನಿ ತನ್ನ ಇನ್‌ಸ್ಟಾಗ್ರಾಮ್‌  ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ. ಧೋನಿ ಬೈಕ್ ಜೊತೆ ಕಾಣಿಸಿಕೊಂಡಿದ್ದಾರೆ. ಟಿವಿಎಸ್ ಮೋಟಾರ್ ಕಂಪನಿಯ ಬಿಸಿನೆಸ್ ಹೆಡ್ ವಿಮಲ್ ಸುಂಬ್ಲಿ, ಧೋನಿಗೆ ಹೊಸ ಬೈಕ್‌ನ ಕೀಗಳನ್ನು ಹಸ್ತಾಂತರಿಸಿದ್ರು.

ಧೋನಿ ಬಳಿ ಕಾನ್ಫೆಡರೇಟ್ X132 Hellcat, Harley Davidson Fat Boy, Kawasaki Ninja ZX-14 ಮತ್ತು Kawasaki Ninja H2 ನಂತಹ ಸೂಪರ್‌ ಬೈಕ್‌ಗಳಿವೆ. ಇದಲ್ಲದೆ ಸುಜುಕಿ ಶೋಗನ್, ಯಮಹಾ ಆರ್‌ಎಕ್ಸ್ 100 ಮತ್ತು ಯಮಹಾ ಆರ್‌ಡಿ 350 ನಂತಹ ಕ್ಲಾಸಿಕ್ ಬೈಕ್‌ಗಳ ಕಲೆಕ್ಷನ್‌ ಅನ್ನು ಕೂಡ ಅವರು ಹೊಂದಿದ್ದಾರೆ. ಧೋನಿ ಹೊಸದಾಗಿ ಖರೀದಿಸಿರುವ ಟಿವಿಎಸ್‌ ರೋನಿನ್‌ ಬೈಕ್‌ 3 ರೂಪಾಂತರಗಳನ್ನು ಹೊರತಂದಿದೆ. ಇದರ ಮೂಲ ರೂಪಾಂತರ ಸಿಂಗಲ್ ಟೋನ್ ಬಣ್ಣ ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಟಾಪ್‌ ಮಾಡೆಲ್‌ ಟ್ರಿಪಲ್ ಟೋನ್ ಬಣ್ಣದೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ. ಈ ಬೈಕ್‌ನಲ್ಲಿ ಗ್ರಾಹಕರು ಒಟ್ಟು 6 ಬಣ್ಣದ ಆಯ್ಕೆಗಳನ್ನು ಪಡೆಯುತ್ತಾರೆ. ಇದು T ಆಕಾರದ DRLಗಳನ್ನು ಸಹ ಹೊಂದಿದೆ. ಈ ಬೈಕ್‌ನ ವಿನ್ಯಾಸ ಉಳಿದ ಬೈಕ್‌ಗಳಿಂದ ಡಿಫರೆಂಟ್‌ ಆಗಿದೆ. ಬೈಕಿನ ಮುಂಭಾಗದಲ್ಲಿ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಕಾಣಬಹುದು.TVS ರೋನಿನ್ 225.9cc ಏರ್/ಆಯಿಲ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. ಎಂಜಿನ್ ಕಾರ್ಯಕ್ಷಮತೆ ಉತ್ತಮವಾಗಿದೆ. ಎಂಜಿನ್‌ನಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...