alex Certify ಈಗಲೂ ಎಲ್ಲರ ಹೃದಯ ಗೆಲ್ಲುತ್ತೆ 1913 ರಲ್ಲಿ ಬರೆದ ಈ ಲವ್ ಲೆಟರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗಲೂ ಎಲ್ಲರ ಹೃದಯ ಗೆಲ್ಲುತ್ತೆ 1913 ರಲ್ಲಿ ಬರೆದ ಈ ಲವ್ ಲೆಟರ್…!

ಈಗೆಲ್ಲ ಮೊಬೈಲ್​ ಜಮಾನ ಹಾಸು ಹೊಕ್ಕಾಗಿದೆ. ಆದರೆ ಹಿಂದೆಲ್ಲ ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಬೇಕು ಅಂದರೆ ಅದಕ್ಕೆ ಪತ್ರವೊಂದೇ ಮಾರ್ಗವಾಗಿತ್ತು.

ಅದರಲ್ಲೂ ಪ್ರೇಮಿಗಳಂತೂ ತಮ್ಮ ಪ್ರೀತಿಯ ಸಂಭಾಷಣೆಯನ್ನು ಪ್ರೇಮ ಪತ್ರದ ಮೂಲಕವೇ ಮಾಡುತ್ತಿದ್ದರು. ಅದೇ ರೀತಿ 1913ರಲ್ಲಿ ಕಾರ್ಟೂನಿಸ್ಟ್​ ಒಬ್ಬರು ತಮ್ಮ ಪತ್ನಿಗೆ ಬರೆದ ಪ್ರೇಮ ಪತ್ರವು ವಿಶಿಷ್ಠ ಕಾರಣದಿಂದಾಗಿ ಈಗ ಸುದ್ದಿಯಲ್ಲಿದೆ.

ಈ ಪತ್ರವನ್ನು ಅಮೆರಿಕದ ವ್ಯಂಗ್ಯಚಿತ್ರಕಾರ ಆಲ್ಬ್ರೆಡ್​ ಜೋಸೆಫ್​ ಫ್ರೂಹ್​​ 1913ರ ಜನವರಿ 10ರಂದು ತಮ್ಮ ಪತ್ನಿ ಗಿಲಿಯೆಟ್​ ಫ್ಯಾನ್ಸಿಯುಲ್ಲಿಗೆ ಬರೆದಿದ್ದಾರೆ.

ಪತ್ರದ ಮೇಲೆ ಬರೆಯುವ ಶೈಲಿಯು ಆಕರ್ಷಕವಾಗಿದ್ದರೂ ಸಹ ಇದರ ವಿನ್ಯಾಸ ಇನ್ನಷ್ಟು ಕುತೂಹಲಕಾರಿಯಾಗಿದೆ. ನೀಡಲಾದ ಮಾರ್ಗಸೂಚಿಯಂತೆ ಪತ್ರವನ್ನು ಮಡಿಸುತ್ತಾ ಹೋದರೆ ಅದೊಂದು ಆರ್ಟ್​ ಗ್ಯಾಲರಿಯ ಮಾದರಿಯಂತೆ ರೂಪಾಂತರಗೊಳ್ಳುತ್ತದೆ.

ಕಾಗದದ ಮೇಲೆ ಬರೆಯುವ ಶೈಲಿಯು ಆಕರ್ಷಕವಾಗಿದ್ದರೂ, ವಿನ್ಯಾಸ ಮತ್ತು ಪ್ರಸ್ತುತಿ ಹೆಚ್ಚು ಭವ್ಯವಾಗಿದೆ. ಸೂಚನೆಗಳ ಪ್ರಕಾರ ಮಡಿಸಿದರೆ, ಪತ್ರವು ಆರ್ಟ್ ಗ್ಯಾಲರಿಯ ಮಿನಿ ಮಾದರಿಯಾಗಿ ರೂಪಾಂತರಗೊಳ್ಳುತ್ತದೆ.

ಈ ಪ್ರೇಮ ಪತ್ರವು ವರ್ಣಚಿತ್ರಗಳನ್ನು ನೇತುಹಾಕಲಾದ ಗ್ಯಾಲರಿಯ ಮಾದರಿಯನ್ನು ರೂಪಿಸುತ್ತದೆ. ಪತ್ನಿಯು ತನ್ನ ಆರ್ಟ್​ ಗ್ಯಾಲರಿಗೆ ಭೇಟಿ ನೀಡುವ ಬಗ್ಗೆ ಗ್ಯಾಲರಿಯ ಬಗ್ಗೆ ಪತ್ನಿಗೆ ಮಾಹಿತಿ ನೀಡುವ ಸಲುವಾಗಿ ಈ ರೀತಿ ವಿಭಿನ್ನ ಪ್ರೇಮ ಪತ್ರವನ್ನು ಆಲ್ಬ್ರೆಡ್​ ತಮ್ಮ ಪತ್ನಿಗೆ ಬರೆದಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...