alex Certify ಇವುಗಳನ್ನು ಪಡೆಯುವಾಗ ಸಂಕೋಚ ಬೇಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವುಗಳನ್ನು ಪಡೆಯುವಾಗ ಸಂಕೋಚ ಬೇಡ

 

ಪರರ ವಸ್ತುಗಳಿಗೆ ಆಸೆ ಪಡಬಾರದು ಎನ್ನುತ್ತಾರೆ ಹಿರಿಯರು. ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಯಾವುದೇ ಸಂಕೋಚವಿಲ್ಲದೆ, ಎಲ್ಲಿಯಾದ್ರೂ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಮನು ಸ್ಮೃತಿಯ ಶ್ಲೋಕವೊಂದರಲ್ಲಿ 7 ವಸ್ತುಗಳನ್ನು ಉಲ್ಲೇಖ ಮಾಡಲಾಗಿದೆ. ಆ ವಸ್ತುಗಳನ್ನು ಎಲ್ಲಿ, ಯಾರಿಂದ, ಯಾವಾಗಲಾದ್ರೂ ಸಂಕೋಚವಿಲ್ಲದೆ ಪಡೆಯಬೇಕಂತೆ.

ದುಬಾರಿ ರತ್ನ: ವಜ್ರ, ನೀಲಂ, ಪನ್ನಾ ಸೇರಿದಂತೆ ರತ್ನಗಳು ದುಬಾರಿಯಾಗಿರುತ್ತವೆ. ಸಮುದ್ರ ತೀರ ಹಾಗೂ ಗಣಿ ಪ್ರದೇಶ ಸ್ವಚ್ಛವಾಗಿರುವುದಿಲ್ಲ. ಆದ್ರೆ ಅಲ್ಲಿ ಸಿಗುವ ಈ ವಸ್ತುಗಳನ್ನು ಧರಿಸುವುದು ಬಹಳ ಒಳ್ಳೆಯದು. ಇವು ನಿಮಗೆ ಲಾಭ ತಂದುಕೊಡುತ್ತವೆ.

ಶಿಕ್ಷಣ : ವಿದ್ಯೆ ಎಲ್ಲಿಯಾದ್ರೂ, ಯಾರಿಂದ ಸಿಕ್ಕಿದ್ರೂ ಸಂಕೋಚವಿಲ್ಲದೆ ಪಡೆಯಿರಿ. ಪ್ರತಿಯೊಂದರ ಬಗ್ಗೆ ಜ್ಞಾನವಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಜೀವನದ ಸಮಸ್ಯೆಯಿಂದ ಹೊರ ಬರಲು ವಿದ್ಯೆ ಬಹಳ ಮುಖ್ಯ.

ಅತಿಯಾದ ಮಾಂಸ ಸೇವನೆಯಿಂದ ಪರಿಸರಕ್ಕೆ ಹಾನಿ ಎನ್ನುತ್ತಿದೆ ಈ ಅಧ್ಯಯನ

ಧರ್ಮ : ಧರ್ಮದ ಅರ್ಥವೇ ಧಾರಣೆ ಮಾಡುವುದು. ಧರ್ಮ ಒಂದು ಶಬ್ಧವಲ್ಲ. ಇಡೀ ಜೀವನವನ್ನು ನಡೆಸುವ ಶಕ್ತಿ ಅದಕ್ಕಿದೆ. ಧರ್ಮ ನಮ್ಮನ್ನು ಸರಿ ಮಾರ್ಗದಲ್ಲಿ ನಡೆಸುವ ಜೊತೆಗೆ ವಾಸ್ತವಿಕ ಜವಾಬ್ದಾರಿ ಬಗ್ಗೆ ತಿಳುವಳಿಕೆ ನೀಡುತ್ತದೆ.

ಪವಿತ್ರತೆ : ಇದು ಕೇವಲ ಶರೀರಕ್ಕೆ ಸಂಬಂಧಿಸಿದ್ದಲ್ಲ. ಆಚಾರ-ವಿಚಾರ ಜೀವನ ವ್ಯವಹಾರಕ್ಕೆ ಸಂಬಂಧಿಸಿದ್ದು. ವ್ಯಕ್ತಿಯ ಚರಿತ್ರೆ, ವ್ಯವಹಾರದಲ್ಲಿ ಬದಲಾವಣೆಯಾದಾಗ ಮಾತ್ರ ಜೀವನದಲ್ಲಿ ಉನ್ನತಿ ಸಾಧ್ಯ.

ಉಪದೇಶ: ಪವಿತ್ರ ಸ್ಥಳದಲ್ಲಿ ಜ್ಞಾನಿಯೊಬ್ಬರು ನಿಮಗೆ ಉಪದೇಶ ಮಾಡುತ್ತಿದ್ದರೆ ಅದನ್ನು ಕೇಳದೆ ಹಾಗೆ ಬರಬೇಡಿ. ಯಾವ ವ್ಯಕ್ತಿಯ ಯಾವ ಉಪದೇಶ ನಮ್ಮ ಜೀವನದಲ್ಲಿ ಬದಲಾವಣೆ ತರುತ್ತೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರ ಮಾತನ್ನು ಆಲಿಸಬೇಕು.

ಕಲೆ : ಕಲೆ ಕೂಡ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಲೆಯನ್ನು ಹೇಳಿಕೊಡುವ ವ್ಯಕ್ತಿಯನ್ನು ಗೌರವಿಸಬೇಕು. ಕಲೆ ಯಾವುದೇ ಆಗಿರಲಿ, ಸರಿಯಾಗಿ ಕಲಿತಲ್ಲಿ ನಿಮ್ಮ ಹಾಗೂ ಕುಟುಂಬ ನಿರ್ವಹಣೆಗೆ ಇದು ನೆರವಾಗಲಿದೆ.

ಗುಣವಂತ ಮಹಿಳೆ : ಸೌಂದರ್ಯಕ್ಕಿಂತ ಗುಣಕ್ಕೆ ಹೆಚ್ಚಿನ ಬೆಲೆ. ಕುಟುಂಬಸ್ಥರ ಬಗ್ಗೆ ಚಿಂತೆ ಮಾಡುವ, ಮನೆ, ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ, ಪತಿಯ ಬೆಂಬಲಕ್ಕೆ ಸದಾ ಇರುವ ಮಹಿಳೆ ಸೌಭಾಗ್ಯಶಾಲಿಯಾಗಿರುತ್ತಾಳೆ. ಅಂತ ಸ್ತ್ರೀಯಲ್ಲಿ ಸೌಂದರ್ಯ ಹುಡುಕುವುದು ಮೂರ್ಖತನ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...