alex Certify ಇಲ್ಲಿದೆ ಬೀದಿ ಬದಿ ಕ್ಯಾಂಡಲ್ ಮಾರಾಟದಿಂದ ಶುರುವಾದ ದೃಷ್ಟಿಹೀನ ದಿವ್ಯಾಂಗ ವ್ಯಕ್ತಿಯೊಬ್ಬರ ಯಶಸ್ಸಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬೀದಿ ಬದಿ ಕ್ಯಾಂಡಲ್ ಮಾರಾಟದಿಂದ ಶುರುವಾದ ದೃಷ್ಟಿಹೀನ ದಿವ್ಯಾಂಗ ವ್ಯಕ್ತಿಯೊಬ್ಬರ ಯಶಸ್ಸಿನ ಕಥೆ

ಟಿವಿ ಶೋ ʼಸತ್ಯಮೇವ ಜಯತೆʼಯಲ್ಲಿ ಕಾಣಿಸಿಕೊಂಡಿದ್ದ ದೃಷ್ಟಿಹೀನ ಉದ್ಯಮಿ ಡಾ. ಭವೇಶ್ ಭಾಟಿಯಾ ಅವರ ಬಗ್ಗೆ ನಿಮಗೆ ಗೊತ್ತಿದೆಯೇ..? ಹ್ಯೂಮನ್ಸ್ ಆಫ್ ಬಾಂಬೆ ಎಂಬ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕಥೆಯನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.

ಡಾ. ಭವೇಶ್ ಭಾಟಿಯಾ ಅವರು ಹುಟ್ಟುವಾಗಲೇ ರೆಟಿನಾ ಮ್ಯಾಕ್ಯುಲರ್ ಡಿಜೆನರೇಶನ್‌ ಮತ್ತು ದೃಷ್ಟಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ತಾಯಿ ಸದಾ ಬೆಂಬಲವಾಗಿ ನಿಂತಿದ್ದರು. ಸವಾಲುಗಳನ್ನು ಎದುರಿಸಲು ಅವರನ್ನು ಪ್ರೋತ್ಸಾಹಿಸಿದ್ರು. ಆದರೆ, ದುರಾದೃಷ್ಟವಶಾತ್ ಅವರು ಕ್ಯಾನ್ಸರ್ ನಿಂದ ಮೃತಪಟ್ಟರು.

ತಾಯಿಯ ನಿಧನದ ಬಳಿಕ ಭವೇಶ್ ಬೇರೆ-ಬೇರೆ ಕೆಲಸಗಳನ್ನು ಮಾಡಲು ಶುರು ಮಾಡಿದ್ರು. ನ್ಯಾಷನಲ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್‌ನಲ್ಲಿ ಕ್ಯಾಂಡಲ್ ತಯಾರಿಕೆಯನ್ನು ಕಲಿತರು. ನಂತರ ಅವರು ಮಹಾಬಲೇಶ್ವರದ ಚರ್ಚ್‌ನ ಮುಂದೆ ಮೇಣದಬತ್ತಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೇರು.

ಅನೇಕ ವಿಫಲ ಪ್ರಯತ್ನಗಳ ನಂತರ, ಅವರು ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡು ಸನ್‌ರೈಸ್ ಕ್ಯಾಂಡಲ್ಸ್ ಎಂಬ ಮೇಣದಬತ್ತಿಗಳನ್ನು ತಯಾರಿಸುವ ಕಂಪನಿಯನ್ನು ಸ್ಥಾಪಿಸಿದ್ರು. ಇಂದು ಅವರು ತಮ್ಮ ಕಂಪನಿಯಲ್ಲಿ 3,470 ದೃಷ್ಟಿ ವಿಕಲಚೇತನರನ್ನು ನೇಮಿಸಿಕೊಂಡಿದ್ದಾರೆ. ಅವರು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಲ್ಲಿ ಸಹ ಭಾಗವಹಿಸಿದ್ದು, 114 ಪದಕಗಳನ್ನು ಗೆದ್ದಿದ್ದಾರೆ.

ಅಂದಹಾಗೆ, ಡಾ. ಭವೇಶ್ ಭಾಟಿಯಾ ಅವರು ಭಾರತದ ರಾಷ್ಟ್ರಪತಿಗಳಿಂದ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂದು, 72 ಉತ್ಪಾದನಾ ಘಟಕಗಳಲ್ಲಿ ಸನ್‌ರೈಸ್ ಕ್ಯಾಂಡಲ್ಸ್, 9700ಕ್ಕಿಂತಲೂ ಹೆಚ್ಚು ದಿವ್ಯಾಂಗ, ವಿಕಲಾಂಗ ವ್ಯಕ್ತಿಗಳು ಮತ್ತು ವಿಶೇಷ ವ್ಯಕ್ತಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ, ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸಲು ಸಮರ್ಥವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...