alex Certify ಇಲ್ಲಿದೆ ಪ್ರಸಿದ್ದ ಸಿಹಿ ‘ಧಾರವಾಡ ಪೇಡಾ’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಪ್ರಸಿದ್ದ ಸಿಹಿ ‘ಧಾರವಾಡ ಪೇಡಾ’ ಮಾಡುವ ವಿಧಾನ

ಧಾರವಾಡ ಪೇಡಾ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ಮೆತ್ತಗೆ ಇರುವ ಈ ಪೇಡಾವನ್ನು ತಿನ್ನುತ್ತಿದ್ದರೆ ಅದರ ಮಜಾನೇ ಬೇರೆ. ಮನೆಯಲ್ಲಿ ಕೂಡ ಸುಲಭವಾಗಿ ಈ ಪೇಡಾ ಮಾಡಿಕೊಳ್ಳಬಹುದು. ಸಮಯ ಸ್ವಲ್ಪ ಜಾಸ್ತಿ ಬೇಕಾದರೂ ರುಚಿಕರವಾಗಿರುತ್ತದೆ.

1 ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಅದನ್ನು ಚೆನ್ನಾಗಿ ಕುದಿಸಿ. ನಂತರ ಅದಕ್ಕೆ 2 ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸ ಹಾಕಿ. ಹದ ಉರಿಯಲ್ಲಿ ಇಟ್ಟು ಚೆನ್ನಾಗಿ ಮಿಕ್ಸ್ ಮಾಡಿ. ಹಾಲು ಒಡೆಯುತ್ತದೆ. ನಂತರ ಇದನ್ನು ಒಂದು ಮಸ್ಲಿನ್ ಬಟ್ಟೆಯ ಸಹಾಯದಿಂದ ಸೋಸಿಕೊಳ್ಳಿ.

ನಂತರ ಆ ಮಿಶ್ರಣಕ್ಕೆ ಮತ್ತೊಮ್ಮೆ ನೀರು ಹಾಕಿ ಸೋಸಿಕೊಳ್ಳಿ. ನೀರಿನಂಶವನ್ನೆಲ್ಲ ಬಟ್ಟೆಯ ಸಹಾಯದಿಂದ ಹಿಂಡಿ ತೆಗೆಯಿರಿ. ನಂತರ ಈ ಮಿಶ್ರಣವನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ 1 ನಿಮಿಷಗಳ ಕಾಲ ಫ್ರೈ ಮಾಡಿ. ಇದಕ್ಕೆ 1 ಟೇಬಲ್ ಸ್ಪೂನ್ ತುಪ್ಪ ಸೇರಿಸಿ ಮತ್ತೊಮ್ಮೆ ಫ್ರೈ ಮಾಡಿ.

ಇದಾದ ಬಳಿಕ 6 ಟೇಬಲ್ ಸ್ಪೂನ್ ಸಕ್ಕರೆ, 1 ಟೇಬಲ್ ಸ್ಪೂನ್ ಹಾಲು ಹಾಕಿ 10 ನಿಮಿಷಗಳ ಕಾಲ ಕೈಯಾಡಿಸುತ್ತಾ ಇರಿ. ಇದು ತುಸು ಬಣ್ಣ ಬದಲಾಗುತ್ತಿದ್ದಂತೆ ಮತ್ತೆ 1 ಟೇಬಲ್ ಸ್ಪೂನ್ ಹಾಲು ಸೇರಿಸಿ 4 ನಿಮಿಷಗಳ ಕಾಲ ಫ್ರೈ ಮಾಡಿ.

ಹೊಂಬಣ್ಣಕ್ಕೆ ತಿರುಗಿದಾಗ ಗ್ಯಾಸ್ ಆಫ್ ಮಾಡಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಪ್ಯಾನ್ ಗೆ ಹಾಕಿ ಅದಕ್ಕೆ 3 ಟೇಬಲ್ ಸ್ಪೂನ್ ಹಾಲು ಹಾಕಿ ಸಣ್ಣ ಉರಿಯಲ್ಲಿ 30 ನಿಮಿಷಗಳ ಕಾಲ ಕೈಬಿಡದೇ ಮಿಕ್ಸ್ ಮಾಡುತ್ತಲೇ ಇರಿ. ತಳಹತ್ತದಂತೆ ಜಾಗೃತೆ ವಹಿಸಿ.

ಇದಕ್ಕೆ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ. ನಂತರ ಇದರಿಂದ ಹದ ಗಾತ್ರದ ಉಂಡೆ ಕಟ್ಟಿಕೊಳ್ಳಿ. 3 ಟೇಬಲ್ ಸ್ಪೂನ್ ನಷ್ಟು ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡಿರಿ. ಸಕ್ಕರೆ ಪುಡಿಯಲ್ಲಿ ಈ ಪೇಡಾವನ್ನು ಹೊರಳಾಡಿಸಿದರೆ ರುಚಿಕರವಾದ ಪೇಡಾ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...