alex Certify ಇಲ್ಲಿದೆ ʼಪನ್ನೀರ್ʼ ಚಿಲ್ಲಿ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಪನ್ನೀರ್ʼ ಚಿಲ್ಲಿ ಮಾಡುವ ವಿಧಾನ

ಪನ್ನೀರ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದರಿಂದ ರುಚಿಕರವಾದ ಪನ್ನೀರ್ ಚಿಲ್ಲಿಯನ್ನು ಮಾಡಬಹುದು. ಇದು ಸೈಡ್ ಡಿಶ್ ಆಗಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು:

200 ಗ್ರಾಂ-ಪನ್ನೀರ್, 3 ಟೇಬಲ್ ಸ್ಪೂನ್-ಕಾರ್ನ್ ಫ್ಲೋರ್, 3 ಹಸಿಮೆಣಸು, 2 ಟೇಬಲ್ ಸ್ಪೂನ್-ಟೊಮೆಟೊ ಕೆಚಪ್, 1 ಟೇಬಲ್ ಸ್ಪೂನ್-ಚಿಲ್ಲಿ ಸಾಸ್, 2 ಟೇಬಲ್ ಸಾಸ್-ಸೋಯಾ ಸಾಸ್, ಉಪ್ಪು-ಚಿಟಿಕೆ, ಎಣ್ಣೆ-ಹುರಿಯಲು, 2-ಈರುಳ್ಳಿ ಕತ್ತರಿಸಿದ್ದು.

ಮಾಡುವ ವಿಧಾನ:

ಮೊದಲಿಗೆ ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ನಂತರ ಪನ್ನೀರ್ ಕ್ಯೂಬ್ ಅನ್ನು ಕಾರ್ನ್ ಫ್ಲೋರ್ ನಲ್ಲಿ ಹೊರಳಾಡಿಸಿ ಎಣ್ಣೆ ಪ್ಯಾನ್ ಗೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

ನಂತರ ಇನ್ನೊಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಹಸಿಮೆಣಸು ಹಾಗೂ ಹುರಿದಿಟ್ಟುಕೊಂಡ ಪನ್ನೀರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಚಿಲ್ಲಿ ಸಾಸ್, ಕೆಚಪ್, ಸೋಯಾ ಸಾಸ್ ಹಾಕಿ 5 ನಿಮಿಷಗಳ ಕಾಲ ಕೈಯಾಡಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...