alex Certify ಇಲ್ಲಿದೆ ನೋಡಿ ಶ್ರೀಮಂತ ಮನಸ್ಸಿನವರ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ಶ್ರೀಮಂತ ಮನಸ್ಸಿನವರ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ…!

ದೇಶದಾದ್ಯಂತ ಸಡಗರ ಸಂಭ್ರಮದಿಂದ ಗಣೇಶೋತ್ಸವವನ್ನು ಆಚರಿಸಲಾಗಿದೆ.  ಎರಡು ವರ್ಷಗಳ ಹಿಂದೆ ಕೊರೊನಾ ಕಾಣಿಸಿಕೊಂಡ ಬಳಿಕ ಸಾರ್ವಜನಿಕ ಗಣೇಶೋತ್ಸವಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಈ ಬಾರಿ ಅನುಮತಿ ನೀಡಿರುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿದೆ.

ಹೀಗಾಗಿ ಪ್ರತಿಯೊಂದು ಊರಿನಲ್ಲೂ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಕೆಲವೆಡೆ ಈಗಾಗಲೇ ಗಣಪತಿ ವಿಸರ್ಜನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅದ್ದೂರಿ ಮೆರವಣಿಗೆ, ಡಾನ್ಸ್‌ ಸೇರಿದಂತೆ ಕಲಾತಂಡಗಳು ವಿಸರ್ಜನಾ ಮೆರವಣಿಗೆಗೆ ಕಳೆ ತಂದಿದ್ದವು.

ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಹರಿದಾಡುತ್ತಿದ್ದು, ಇದನ್ನು ಶ್ರೀಮಂತ ಮನಸ್ಸಿನವರ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ ಎಂದು ಬಣ್ಣಿಸಲಾಗುತ್ತಿದೆ.

ಮನಸ್ಸಿಗೆ ಖುಷಿ ನೀಡುವ ಈ ಸುಂದರ ವಿಡಿಯೋದಲ್ಲಿ ಪುಟ್ಟ ಮಕ್ಕಳು ಗಾಡಿಯೊಂದರಲ್ಲಿ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ಕೋಲಿನಿಂದ ಡಬ್ಬ ಬಡಿಯುತ್ತಾ ಮೆರವಣಿಗೆ ಹಿಂಬಾಲಿಸಿದ್ದಾರೆ. ಜೊತೆಗೆ ಮೂರ್ನಾಲ್ಕು ಪುಟ್ಟ ಹುಡುಗ – ಹುಡುಗಿಯರು ಮೆರವಣಿಗೆ ಜೊತೆ ಹೆಜ್ಜೆ ಹಾಕಿದ್ದಾರೆ. ನೀವೂ ಈ ವಿಡಿಯೋ ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...