alex Certify ಉದ್ದಿನ ವಡೆ ಮಾಡುವ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ದಿನ ವಡೆ ಮಾಡುವ ಸುಲಭ ವಿಧಾನ

ಇಡ್ಲಿ ಸಾಂಬಾರಿನ ಜತೆಗೆ ಉದ್ದಿನ ವಡೆ ಇದ್ದರೆ ತಿನ್ನಲು ರುಚಿಕರವಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಉದ್ದಿನ ವಡೆ ವಿಧಾನ ಇದೆ ನೋಡಿ.

1 ಕಪ್ ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಹಾಕಿ. ನಂತರ ಈ ಉದ್ದಿನಬೇಳೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಂಡು ಒಂದು ಬೌಲ್ ಗೆ ತೆಗೆದುಕೊಳ್ಳಿ.

ನಂತರ 2 ಟೇಬಲ್ ಸ್ಪೂನ್ ನಷ್ಟು ತೆಂಗಿನಕಾಯಿ ಪೀಸ್ ಚಿಕ್ಕದಾಗಿ ಕತ್ತರಿಸಿಕೊಂಡಿದ್ದು, 1 ಚಮಚದಷ್ಟು ಶುಂಠಿ ತುರಿ, ಹಸಿಮೆಣಸು-2 ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, ಕರಿಬೇವು-5 ಎಸಳು ಸಣ್ಣಗೆ ಕತ್ತರಿಸಿಕೊಂಡಿದ್ದನ್ನೆಲ್ಲಾ ರುಬ್ಬಿಟ್ಟುಕೊಂಡಿದ್ದು ಉದ್ದಿನಬೇಳೆಯ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಉಪ್ಪು ಸೇರಿಸಿ ಮಿಶ್ರಣ ಮಾಡಿ. ನಂತರ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಬಿಸಿಗೆ ಇಟ್ಟು ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಮಧ್ಯೆ ತೂತು ಮಾಡಿ ಎಣ್ಣೆಯಲ್ಲಿ ಕರಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...