alex Certify ಇಲ್ಲಿದೆ ʼತಾಲಿಬಾನ್ʼ ಎಂಬ ರಾಕ್ಷಸ ಹುಟ್ಟಿದ್ದರ ಹಿನ್ನಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼತಾಲಿಬಾನ್ʼ ಎಂಬ ರಾಕ್ಷಸ ಹುಟ್ಟಿದ್ದರ ಹಿನ್ನಲೆ

1973ರಲ್ಲಿ ತಾಲಿಬಾನ್ ಸಂಘಟನೆಯ ಜನ್ಮವಾಗಿದ್ದರೂ, ಅದು ಬೆಳಕಿಗೆ ಬಂದಿದ್ದು ಮಾತ್ರ 90ರ ದಶಕದಲ್ಲಿ ! ಹೌದು, ಅಫ್ಘಾನಿಸ್ತಾನದ ಪ್ರಧಾನಿ ಸರ್ದಾರ್ ದಾವೂದ್ ಖಾನ್ ಅವರು ಪಾಕಿಸ್ತಾನದ ವಿರುದ್ಧ ಸಾರ್ವಜನಿಕವಾಗಿಯೇ ಕಿಡಿಕಾರುತ್ತಿದ್ದರು. ಪಶ್ತೂನ್ ಮತ್ತು ಬಲೂಚ್ ಪ್ರಾಂತ್ಯದ ಜನರ ಮೇಲೆ ಪಾಕಿಸ್ತಾನ ಸರ್ಕಾರ, ಮಿಲಿಟರಿಯ ದೌರ್ಜನ್ಯವನ್ನು ಖಂಡಿಸುತ್ತಿದ್ದರು.

ಅಲ್ಲದೆ, ಸೋವಿಯತ್ ಒಕ್ಕೂಟಕ್ಕೆ ಸರ್ದಾರ್ ದಾವೂದ್ ಖಾನ್ ಬಹಳ ಹತ್ತಿರದವರು ಕೂಡ ಆಗಿದ್ದರು. ಇವೆಲ್ಲ ಅಂಶಗಳನ್ನು ಪಾಕಿಸ್ತಾನ ಜೀರ್ಣಿಸಿಕೊಳ್ಳಲು ಪರದಾಡುತ್ತಿತ್ತು.

ಹಾಗಾಗಿ, ನರಿಬುದ್ಧಿಯ ಪಾಕಿಸ್ತಾನ ಕುತಂತ್ರ ಹೆಣೆಯಿತು. 1974ರಲ್ಲಿ ಮೇಜರ್ ಜನರಲ್ ನಸೀರುಲ್ಲಾ ಬಾಬರ್‍ನನ್ನು ತಜಕಿಸ್ತಾನದ ಬಂಡುಕೋರರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡಲು ಪಾಕಿಸ್ತಾನದ ಮಿಲಿಟರಿಯು ನೇಮಿಸಿತು.

ಅವರು ಆಫ್ಘನ್ ಸರ್ಕಾರದ ಮೇಲೆ ದಾಳಿ ನಡೆಸಬೇಕಿತ್ತು. ಆದರೆ ಈ ತಂತ್ರ ಹೀನಾಯವಾಗಿ ವಿಫಲಗೊಂಡಿತು. ಆದರೆ, ಪಾಕಿಸ್ತಾನ ಪೋಷಿತ ಉಗ್ರರು, ಅದರ ಗುಪ್ತಚರ ಸಂಸ್ಥೆ “ಐಎಸ್‍ಐ” ಮತ್ತು ಆಫ್ಘನ್‍ನ ಕೆಲವು ಪ್ರಾಂತ್ಯಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯವು ಈ ಕುತಂತ್ರದಿಂದ ಹೆಚ್ಚಿತು.

ಅಮೆರಿಕದ ಫಂಡಿಂಗ್: ಸೋವಿಯತ್ ಪ್ರಾಬಲ್ಯ ಕುಗ್ಗಿಸಲು ಯತ್ನಿಸುತ್ತಿದ್ದ ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ಗೆ ಪಾಕಿಸ್ತಾನದ ನಂಟು ಹೊಂದಿರುವ ಆಫ್ಘನ್ ನಾಯಕರು ಸ್ನೇಹಿತರಂತೆ ಕಂಡರು. ಸೋವಿಯತ್ ನಿರ್ನಾಮಕ್ಕೆ ಅಫ್ಘಾನಿಸ್ತಾನದಲ್ಲಿ ಸಿಐಎ ಹಣಕಾಸು ನೆರವಿನಿಂದ ದೊಡ್ಡ ಮಟ್ಟದಲ್ಲಿ ಗೌಪ್ಯ ಕಾರ್ಯಾಚರಣೆ ನಡೆಯಿತು.

ಸಹೋದರಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ರಾಹುಲ್

ಬಳಿಕ ಮೇಜರ್ ಬಾಬರ್ ರಾಜಕೀಯ ಪ್ರವೇಶದೊಂದಿಗೆ, ಪಾಕಿಸ್ತಾನದ ರಕ್ಷಣಾ ಸಚಿವ ಕೂಡ ಆದರು. ಈ ವೇಳೆ ಅವರೇ ತರಬೇತಿ ನೀಡಿದ್ದ ಬಂಡುಕೋರರ ಗುಂಪು, ತಾಲಿಬಾನ್ ಹೆಸರಿನಲ್ಲಿ ರಕ್ತದ ಹೊಳೆ ಹರಿಸುವ ಉಗ್ರರ ದಂಡಾಗಿತ್ತು. ಆ ಉಗ್ರರು ನಿಧಾನವಾಗಿ ಆಫ್ಘನ್ ರಾಜಕೀಯ ನಾಯಕರೂ ಕೂಡ ಆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...