alex Certify ಇಲ್ಲಿದೆ ʼಆರೋಗ್ಯʼಕರ ಜೀವನ ಶೈಲಿ ರಹಸ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಆರೋಗ್ಯʼಕರ ಜೀವನ ಶೈಲಿ ರಹಸ್ಯ…!

ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮಗಳು ಮೊದಲಾದವುಗಳಿಂದ ಮನುಷ್ಯನ ಆಯಸ್ಸು ಕಡಿಮೆಯಾಗಿದೆ. ಹಿಂದೆಲ್ಲಾ 100 ವರ್ಷದವರೆಗೂ ಮನುಷ್ಯರು ಜೀವಿಸುತ್ತಿದ್ದರು. ಬರಬರುತ್ತಾ ಜೀವಿತಾವಧಿ ಕಡಿಮೆಯಾಗತೊಡಗಿದೆ. ಚಿಕ್ಕ ವಯಸ್ಸಿನಲ್ಲೇ ಕಾಯಿಲೆ ಆವರಿಸುತ್ತವೆ. ದೀರ್ಘಾಯುಷ್ಯದ ರಹಸ್ಯವನ್ನು ತಿಳಿಯಲು ಹಿಂದಿನಿಂದಲೂ ಪ್ರಯತ್ನಗಳು ನಡೆದಿವೆ. ಆದರೆ, ಗುಟ್ಟು ಮಾತ್ರ ಬಹಿರಂಗವಾಗಿಲ್ಲ.

ಆದರೆ, ಸಂಶೋಧಕರು ನಿರಂತರವಾದ ಅಧ್ಯಯನದ ಬಳಿಕ ಜೀವನ ಶೈಲಿಯೇ ದೀರ್ಘಾಯುಷ್ಯದ ಗುಟ್ಟು ಎಂದು ಹೇಳುತ್ತಾರೆ. ಮಾನವ ಶಾಸ್ತ್ರಜ್ಞರು, ವೈದ್ಯರು, ಸೋಂಕು ಶಾಸ್ತ್ರಜ್ಞರು, ಪೌಷ್ಠಿಕ ತಜ್ಞರು, ಜನಸಂಖ್ಯಾ ಶಾಸ್ತ್ರಜ್ಞರು ಮೊದಲಾದ ವಿಶೇಷ ತಜ್ಞರನ್ನು ಒಳಗೊಂಡ ತಂಡದಿಂದ ಸಾಮಾನ್ಯ ವಲಯದ ಜನರು ದೀರ್ಘಾವಧಿಯ ಜೀವನದ ಕಾರಣಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಅದರಂತೆ, ಸಾಮಾನ್ಯ ವಲಯದ ಜನರು ದೈಹಿಕ ಚಟುವಟಿಕೆಗಳನ್ನು ಹೆಚ್ಚಾಗಿ ನಿರ್ವಹಿಸುತ್ತಾರೆ. ಅವರು ಸದೃಢರಾಗಿರುತ್ತಾರೆ. ಇದರೊಂದಿಗೆ ಒತ್ತಡದಿಂದ ಕಡಿಮೆ ಆಗಲು ನಿದ್ರೆ, ಪ್ರಾರ್ಥನೆ ಅವಶ್ಯಕ. ಮನರಂಜನೆಯಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಹೊಟ್ಟೆ ತುಂಬ ತಿಂದು ತೇಗದೇ ಶೇ. 80 ರಷ್ಟು ಹಸಿವು ನೀಗಿಸಿಕೊಳ್ಳುವುದು. ಜೀವನದ ಬಗ್ಗೆ, ದಿನಚರಿಯ ಬಗ್ಗೆ ತಿಳಿದುಕೊಂಡಿರಿ. ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಹೆಚ್ಚು ಮಸಾಲೆ, ಮಾಂಸಾಹಾರಗಳಿಂದ ದೂರವಿರಿ. ಆರೋಗ್ಯಕ್ಕೆ ಪೂರಕವಲ್ಲದ ಉತ್ಪನ್ನಗಳನ್ನು ಬಳಸಬೇಡಿ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...