alex Certify ʼಇಯರ್ʼ ವ್ಯಾಕ್ಸ್ ಕ್ಲೀನ್ ಮಾಡಲು ಮರೆಯದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಯರ್ʼ ವ್ಯಾಕ್ಸ್ ಕ್ಲೀನ್ ಮಾಡಲು ಮರೆಯದಿರಿ

ಕಿವಿ ಮೇಣದಂತಹ ವಸ್ತುಗಳನ್ನು ಸ್ರವಿಸುತ್ತದೆ. ಇದು ಕಿವಿಯೊಳಗೆ ನೀರು, ಧೂಳು, ಬ್ಯಾಕ್ಟೀರಿಯಾಗಳು ಹೋಗದಂತೆ ರಕ್ಷಿಸುತ್ತದೆ. ಆದರೆ ಇದನ್ನು ಕಿವಿಯೊಳಗಿನಿಂದ ಹೊರಗೆ ತೆಗೆಯುತ್ತಿರುಬೇಕು. ಇಲ್ಲವಾದರೆ ಕಿವಿನೋವು ಶುರುವಾಗುತ್ತದೆ. ಅದಕ್ಕಾಗಿ ಈ ಮನೆಮದ್ದನ್ನು ಬಳಸಿ.

*ಉಪ್ಪು ನೀರು : ಉಪ್ಪು ನೀರು ಈ ಮೇಣವನ್ನು ಮೃದುವಾಗಿಸುತ್ತದೆ. 1 ಚಮಚ ಉಪ್ಪನ್ನು ½ ಕಪ್ ನೀರಿನಲ್ಲಿ ಬೆರೆಸಿ ಹತ್ತಿಯ ಉಂಡೆಯಿಂದ 2 ಹನಿ ನೀರನ್ನು ಕಿವಿಯೊಳಗೆ ಹಾಕಿ. 5 ನಿಮಿಷ ಬಿಟ್ಟ ಬಳಿಕ ಅದು ಮೃದುವಾಗಿರುತ್ತದೆ. ಅದನ್ನು ಕ್ಲೀನ್ ಮಾಡಿ.

*ಆಲಿವ್ ಆಯಿಲ್ : ಈ ಎಣ್ಣೆ ಕೂಡ ಕಿವಿ ಮೇಣವನ್ನು ಕರಗಿಸುತ್ತದೆ. ಹಾಗಾಗಿ 4 ಹನಿ ಆಲಿವ್ ಆಯಿಲ್ ನ್ನು ಕಿವಿಯೊಳಗೆ ಹಾಕಿ 10 ನಿಮಿಷ ಬಿಟ್ಟರೆ ಅದು ಮೃದುವಾಗಿ ಕರಗಿ ಹೊರ ಬರುತ್ತದೆ.

*ಅಡುಗೆ ಸೋಡಾ : ಇದು ಕೂಡ ಕಿವಿಯ ಮೇಣವನ್ನು ಮೃದುವಾಗಿಸುತ್ತದೆ. 2 ಚಮಚ ನೀರಿನಲ್ಲಿ ¼ ಚಮಚ ಅಡುಗೆ ಸೋಡಾ ಹಾಕಿ ಮಿಶ್ರಣ ಮಾಡಿ ಕಿವಿಗೆ ಹಾಕಿ 10 ನಿಮಿಷದ ಬಳಿಕ ಕ್ಲೀನ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...