alex Certify ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ

ಕೊರೊನಾ ವೈರಸ್‌ ಸಾಂಕ್ರಾಮಿಕ ಆರಂಭವಾಗಿ ಮೂರು ವರ್ಷಗಳೇ ಕಳೆದಿವೆ. ಸದ್ಯ ಕೋವಿಡ್‌ ಮೂರನೇ ಅಲೆ ಇಡೀ ಜಗತ್ತಿಗೇ ಆತಂಕ ಮೂಡಿಸ್ತಾ ಇದೆ. ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಮತ್ತೆ ಕೊರೊನಾರ್ಭಟ ಶುರುವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ವಿಧಾನಗಳಿವೆ. ದೇಹದ ಮಸಾಜ್ ಕೂಡ ಇವುಗಳಲ್ಲೊಂದು.

ಮಸಾಜ್‌ ಪ್ರಯೋಜನಗಳು

ದೇಹಕ್ಕೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಪೋಷಕಾಂಶಗಳನ್ನು ವರ್ಗಾಯಿಸಲು ಮತ್ತು ದೇಹದಲ್ಲಿನ ಚಯಾಪಚಯ ತ್ಯಾಜ್ಯಗಳನ್ನು ಫಿಲ್ಟರ್ ಮಾಡಲು ಸಹಾಯ ಮಾಡುತ್ತದೆ. ನೋವು ಮತ್ತು ಒತ್ತಡವನ್ನು ಕಡಿಮೆ ಮಾಡಲು ಕೂಡ ಮಸಾಜ್‌ ಸಹಾಯ ಮಾಡುತ್ತದೆ.  ಮಸಾಜ್‌ನಿಂದ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಇತರ ಮಾನಸಿಕ ಸಮಸ್ಯೆಗಳು ಕಡಿಮೆಯಾಗುವುದರಿಂದ ಇದು ಮನಸ್ಸಿನ ಆರೋಗ್ಯವನ್ನು ರೂಪಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಮಾನಸಿಕ ಆರೋಗ್ಯವು ಉತ್ತಮ ರೋಗನಿರೋಧಕ ಶಕ್ತಿಗೆ ಸಂಬಂಧಿಸಿದೆ. ಮಸಾಜ್ ದೇಹದಲ್ಲಿ ಲಿಂಫೋಸೈಟ್ಸ್ (ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುವ ಕೋಶಗಳು) ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ಅಧ್ಯಯನಗಳಲ್ಲಿ ದೃಢಪಟ್ಟಿದೆ.

ಮಸಾಜ್ ಮಾಡಲು ಸರಿಯಾದ ಸಮಯ ಯಾವುದು?

ಮಸಾಜ್ ಅನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದು.  ಆದರೆ ಮಸಾಜ್‌ನಿಂದ ಹೆಚ್ಚಿನ ಉಪಯೋಗ ಪಡೆಯಲು ಕಡಿಮೆ ಕಾರ್ಯನಿರತ ಸಮಯದಲ್ಲಿ ಇದನ್ನು ಮಾಡುವುದು ಮುಖ್ಯ. ತಜ್ಞರು ಬೆಳಗ್ಗೆ ಮಸಾಜ್ ಮಾಡಿಸಿಕೊಳ್ಳುವಂತೆ ಶಿಫಾರಸು ಮಾಡುತ್ತಾರೆ. ಬೆಳಗಿನ ಮಸಾಜ್‌ ಬಳಿಕ ನಿಮ್ಮ ದೇಹದಲ್ಲಿ ಶಕ್ತಿಯ ಸಂಚಲನವಾಗುತ್ತದೆ, ನೀವು ದಿನವಿಡೀ ಚಟುವಟಿಕೆಯಿಂದಿರಬಹುದು. ಖಾಲಿ ಹೊಟ್ಟೆಯಲ್ಲಿ ಮಸಾಜ್ ಮಾಡಬಾರದು ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನೀವು ಬೆಳಗ್ಗೆ ಬೇಗನೆ ಮಸಾಜ್ ಮಾಡಿಸಿಕೊಳ್ಳಲು ಇಚ್ಛಿಸಿದರೆ ಅದಕ್ಕೂ ಮೊದಲು ಲಘು ಉಪಹಾರ ಅಥವಾ ಹಣ್ಣುಗಳನ್ನು ತಿನ್ನಬೇಕು. ಆದರೆ ಹೊಟ್ಟೆ ತುಂಬಾ ತಿಂದ ನಂತರವೂ ಮಸಾಜ್‌ ಮಾಡಿಸಿಕೊಳ್ಳಬೇಡಿ. ಮಸಾಜ್ ಮಾಡುವ ಮೊದಲು ಈ ಎರಡು ವಿಷಯಗಳನ್ನು ನೆನಪಿನಲ್ಲಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...