alex Certify ಇನ್ಮೇಲೆ ಸಿಗೋದಿಲ್ಲ ರಾಯಲ್‌ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡ್ತಿದ್ದ ಈ ಸೂಪರ್‌ ಬೈಕ್‌! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮೇಲೆ ಸಿಗೋದಿಲ್ಲ ರಾಯಲ್‌ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡ್ತಿದ್ದ ಈ ಸೂಪರ್‌ ಬೈಕ್‌!

 

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ಕೊಡುವ ಬೈಕ್‌ಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಹಾಗಂತ ಕಂಪನಿ ಪ್ರಯಾಣಿಕ ಬೈಕ್‌ಗಳನ್ನು ಮಾತ್ರ ಮಾರಾಟ ಮಾಡುವುದಿಲ್ಲ.

ಹೀರೋ, ಆಫ್ ರೋಡಿಂಗ್ ಬೈಕ್‌ಗಳನ್ನು ಸಹ ಹೊಂದಿದೆ. ಈ ಬೈಕ್‌ಗಳು ನೇರವಾಗಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನೊಂದಿಗೆ ಸ್ಪರ್ಧಿಸುತ್ತವೆ.  ಕಂಪನಿಯು ತನ್ನ ಹೀರೋ ಎಕ್ಸ್‌ಪಲ್ಸ್ ಸರಣಿಯ ಮೂಲಕ ಡ್ಯುಯಲ್-ಸ್ಪೋರ್ಟ್ಸ್ ಮೋಟಾರ್‌ ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ.

Xpulse 200 2V, 200 4V ಎಂಬ ಎರಡು ಮಾದರಿಗಳು ಲಭ್ಯವಿವೆ. ಆದರೆ ಕಂಪನಿ ಈ ಪೈಕಿ ಒಂದು ಮಾಡೆಲ್‌ನ ಮಾರಾಟವನ್ನೇ ಸ್ಥಗಿತಗೊಳಿಸಿದೆ. ಹೀರೋ Xpulse 200 2V ಬೈಕ್ ಅನ್ನು ಕಂಪನಿ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. Xpulse 200 4V ಕಂಪನಿಯನ್ನು ಬಿಡುಗಡೆ ಮಾಡಿದ ನಂತರ ಈ 2V ಮಾದರಿಯನ್ನು ನಿಲ್ಲಿಸುವ ನಿರೀಕ್ಷೆಯಿತ್ತು. ಆದರೆ ಇಲ್ಲಿಯವರೆಗೆ ಅದನ್ನು ಮಾರಾಟ ಮಾಡಲಾಗುತ್ತಿದೆ. Xpulse 200 2V ಬೆಲೆಯು 1.27 ಲಕ್ಷ ರೂಪಾಯಿ ಇದ್ದು, ಇದು 200 4V ಗಿಂತ 10,000 ರೂಪಾಯಿ ಅಗ್ಗವಾಗಿತ್ತು.

200 4V ಬೆಲೆ 1.37 ಲಕ್ಷ ರೂಪಾಯಿ ಇದೆ. Hero Xpulse 200, 199.6cc, ಸಿಂಗಲ್ ಸಿಲಿಂಡರ್, ಏರ್/ಆಯಿಲ್-ಕೂಲ್ಡ್, ಎರಡು ವಾಲ್ವ್ ಎಂಜಿನ್ ಅನ್ನು ಹೊಂದಿದೆ. ಎಂಜಿನ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್‌ಗೆ  ಜೋಡಿಸಲಾಗಿತ್ತು. ಈ ಬೈಕ್‌ ಆಫ್ ರೋಡ್‌ಗೆ ಹೇಳಿ ಮಾಡಿಸಿದಂತಿತ್ತು. ಉತ್ತಮ ಹ್ಯಾಂಡಲ್‌ಬಾರ್, ಸಿಂಗಲ್ ಪೀಸ್ ಸೀಟ್, ಎಕ್ಸಾಸ್ಟ್ ಮತ್ತು 14-ಲೀಟರ್ ಇಂಧನ ಟ್ಯಾಂಕ್ ಅನ್ನು ಅಳವಡಿಸಲಾಗಿತ್ತು. ಪಡೆದುಕೊಂಡಿದೆ. ಬೈಕ್‌ನ ಸೀಟ್ ಎತ್ತರ 823 ಎಂಎಂ ಈದ್ದರೆ ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಇತ್ತು. ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ

ಈ ಮೋಟಾರ್‌ ಸೈಕಲ್ ನ್ಯಾವಿಗೇಷನ್ ಮತ್ತು ಕಾಲ್‌ ನೋಟಿಫಿಕೇಶನ್‌ಗಾಗಿ ಬ್ಲೂಟೂತ್ ಸಂಪರ್ಕ ಹೊಂದಿದೆ. ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಇದರ ವೈಶಿಷ್ಟ್ಯತೆ. ಈ ಬೈಕ್‌ನ ತೂಕ 157 ಕೆ.ಜಿಯಷ್ಟಿತ್ತು. ನೇರವಾಗಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ಟಕ್ಕರ್‌ ಕೊಡುವಂತಿದ್ದ ಮೋಟಾರ್‌ ಸೈಕಲ್‌ ಮಾರಾಟವನ್ನು ಹೀರೋ ಕಂಪನಿ ಬಂದ್‌ ಮಾಡಿರೋದು ಅಚ್ಚರಿ ಮೂಡಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...