alex Certify ಇನ್ಮೇಲೆ ನಕಲಿ ನಾಣ್ಯಗಳ ಚಲಾವಣೆ ಅಸಾಧ್ಯ; RBIನಿಂದ ಹೊಸ ನಿಯಮ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮೇಲೆ ನಕಲಿ ನಾಣ್ಯಗಳ ಚಲಾವಣೆ ಅಸಾಧ್ಯ; RBIನಿಂದ ಹೊಸ ನಿಯಮ ಜಾರಿ

ನಕಲಿ ನೋಟು, ನಾಣ್ಯಗಳ ಚಲಾವಣೆಯನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಾಣ್ಯ ವಿತರಕಗಳಲ್ಲಿ ನಕಲಿ ನೋಟುಗಳನ್ನು ಸೇರಿಸುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಆಧಾರಿತ ಆಯ್ಕೆಯನ್ನು ಅಳವಡಿಸಿಕೊಳ್ಳಲು ಆರ್‌ಬಿಐ ನಿರ್ಧರಿಸಿದೆ. ಎಂದು ಆರ್‌.ಬಿ.ಐ. ಡೆಪ್ಯುಟಿ ಗವರ್ನರ್ ಟಿ ರವಿಶಂಕರ್ ಹೇಳಿದ್ದಾರೆ. ಈ ಯಂತ್ರಗಳಲ್ಲಿ ನಕಲಿ ಹಣವನ್ನೂ ಹಾಕುತ್ತಿರುವುದು ಅನೇಕ ಬಾರಿ ಬೆಳಕಿಗೆ ಬಂದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಮತ್ತೊಂದು ಆಯ್ಕೆಯನ್ನು ಪರಿಗಣಿಸಿದೆ.

ಅನೇಕರು ಮೊಬೈಲ್‌ಗಳನ್ನು ಬಳಸುತ್ತಾರೆ, ಅದರ ಮೂಲಕ ಕ್ಯೂಆರ್ ಕೋಡ್ ಅನ್ನು ‘ಸ್ಕ್ಯಾನ್’ ಮಾಡಿ ಅದನ್ನು ಯುಪಿಐಗೆ ಲಿಂಕ್ ಮಾಡಬಹುದು.ಈ ಮೂಲಕ ಭೌತಿಕ ಹಣವನ್ನು ಬಳಸದೆಯೇ ವಿತರಣಾ ಯಂತ್ರದಿಂದ ನಾಣ್ಯಗಳನ್ನು ಹಿಂಪಡೆಯಬಹುದು. ದೇಶದಲ್ಲೇ ಈ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ವ್ಯವಸ್ಥೆಯಲ್ಲಿ ನಾಣ್ಯಗಳ ವಿತರಣೆ ಸುಧಾರಿಸಲಿದೆ. RBI, ಖಾತೆಯಿಂದ ಹಣವನ್ನು ಕಡಿತಗೊಳಿಸುವ ಮೂಲಕ ನಾಣ್ಯಗಳನ್ನು ನೀಡುತ್ತದೆ. ಇದಕ್ಕೂ ಮುನ್ನ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ‘ಕ್ಯೂಆರ್’ ಕೋಡ್ ಆಧಾರಿತ ‘ಕಾಯಿನ್ ವೆಂಡಿಂಗ್ ಮೆಷಿನ್’ (ಕ್ಯೂಸಿವಿಎಂ) ಮೇಲೆ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದ್ದರು.

RBI 12 ನಗರಗಳಲ್ಲಿ QR ಕೋಡ್ ಆಧಾರಿತ ನಾಣ್ಯ ವಿತರಕಕ್ಕಾಗಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತದೆ. ಈ ವಿತರಣಾ ಯಂತ್ರಗಳು UPI ಬಳಸಿಕೊಂಡು ಬ್ಯಾಂಕ್ ಗ್ರಾಹಕರ ಖಾತೆಯಿಂದ ಹಣವನ್ನು ಕಡಿತಗೊಳಿಸುವ ಮೂಲಕ ನಾಣ್ಯಗಳನ್ನು ಒದಗಿಸುತ್ತವೆ. ಪ್ರಸ್ತುತ ಲಭ್ಯವಿರುವ ಯಂತ್ರಗಳಲ್ಲಿ ಬ್ಯಾಂಕ್ ನೋಟುಗಳನ್ನು ಹಾಕುವ ಮೂಲಕ ನಾಣ್ಯಗಳನ್ನು ಹೊರತೆಗೆಯಲಾಗುತ್ತದೆ. ನಗದು ನಾಣ್ಯ ವಿತರಣಾ ಯಂತ್ರಕ್ಕೆ ಭೌತಿಕವಾಗಿ ಹಣವನ್ನು ಸೇರಿಸುವ ಮತ್ತು ಅದನ್ನು ಪರಿಶೀಲಿಸುವ ಅಗತ್ಯವಿಲ್ಲ. ಆರಂಭದಲ್ಲಿ 12 ನಗರಗಳಲ್ಲಿ 19 ಸ್ಥಳಗಳಲ್ಲಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ರೈಲು ನಿಲ್ದಾಣಗಳು, ಶಾಪಿಂಗ್ ಮಾಲ್‌ಗಳು, ಮಾರುಕಟ್ಟೆಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...