alex Certify ಇನ್ನೇನು ವಧು-ವರ ಹಾರ ಬದಲಾಯಿಸಬೇಕು ಆಗ ನಡೆದದ್ದೇ ಬೇರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೇನು ವಧು-ವರ ಹಾರ ಬದಲಾಯಿಸಬೇಕು ಆಗ ನಡೆದದ್ದೇ ಬೇರೆ

ಇನ್ನೇನು ಮದುವೆ ಸಮಾರಂಭದಲ್ಲಿ ವರ, ವಧುವಿಗೆ ತಾಳಿ ಕಟ್ಬೇಕು ಅನ್ನೋವಾಗ ನಿಲ್ಸಿ ಅಂತಾ ಯಾರಾದ್ರೂ ಬಂದು ಹೇಳೋದನ್ನು ಸಾಮಾನ್ಯವಾಗಿ ಸಿನಿಮಾದಲ್ಲಿ ನೋಡಿರ್ತೀವಿ. ಆದರೆ, ಇಲ್ಲೊಬ್ಬಳು ವಧು ಇನ್ನೇನು ಹಾರ ಬದಲಾಯಿಸಬೇಕು ಎಂದಾದಾಗ ಮದುವೆ ರದ್ದುಪಡಿಸಲು ನಿರ್ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ ವಧು ಕೋಪಗೊಂಡಿರುವುದನ್ನು ಕಾಣಬಹುದು. ಅಲ್ಲದೆ ಆಕೆ ಮದುವೆಯಾಗಲು ಉತ್ಸುಕಳಾಗಿಲ್ಲ. ಇನ್ನೇನು ಹಾರ ಬದಲಾಯಿಸಬೇಕು ಎಂದಾದಾಗ ಕೋಪಗೊಂಡ ವಧುವು ತನ್ನ ತೋರ್ಬೆರಳನ್ನು ವರನ ಕಡೆಗೆ ತೋರಿಸಿ ಅವನತ್ತ ಕೂಗಿದ್ದಾಳೆ. ಮದುವೆಗೆ ಬಂದಿರೋ ಅತಿಥಿಗಳು ದೃಶ್ಯಾವಳಿಯನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ವಧು ತಾನು ವರನನ್ನು ಮದುವೆಯಾಗುವುದಿಲ್ಲ ಎಂದು ಹೇಳುವುದನ್ನು ಕೇಳಿ ಛಾಯಾಗ್ರಾಹಕರು ಸಹ ಆಘಾತಕ್ಕೊಳಗಾಗಿದ್ದಾರೆ. ಆಕೆ ವೇದಿಕೆಯಿಂದ ಕೆಳಗಿಳಿಯಲು ಪ್ರಯತ್ನಿಸಿದಾಗ, ಮಹಿಳೆಯೊಬ್ಬಳು ಬಂದು ತಡೆದಿದ್ದಾಳೆ. ವರ ಕೂಡ ವೇದಿಕೆಯಿಂದ ಹೊರನಡೆದಿದ್ದಾನೆ.

ನಂತರ ವಧುವಿನ ತಾಯಿ ಅವನನ್ನು ಮಧ್ಯದಲ್ಲಿ ನಿಲ್ಲಿಸಿ, ತನ್ನ ಮಗಳನ್ನು ಮದುವೆಯಾಗುವಂತೆ ಮನವೊಲಿಸುತ್ತಾರೆ. ವರನ ತಾಯಿ ಕೂಡ ಅವನನ್ನು ವೇದಿಕೆಯತ್ತ ತಳ್ಳುತ್ತಾಳೆ. ಜನರು ಇಬ್ಬರನ್ನೂ ಬಲವಂತವಾಗಿ ಮದುವೆಯಾಗುವಂತೆ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೆ, ವಧು ಮಾತ್ರ ಸಾಧ್ಯವಿಲ್ಲ ಎಂಬಂತೆ ತನ್ನ ತಲೆಯನ್ನು ಅಲ್ಲಾಡಿಸುತ್ತಾಳೆ. ಆತನೊಂದಿಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 7.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...