alex Certify ಇನ್ನು ಮುಂದೆ ದ್ರಾಕ್ಷಿ ಬೀಜಗಳನ್ನು ಬಿಸಾಡಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನು ಮುಂದೆ ದ್ರಾಕ್ಷಿ ಬೀಜಗಳನ್ನು ಬಿಸಾಡಬೇಡಿ

ದ್ರಾಕ್ಷಿಯನ್ನು ತಿನ್ನುವಾಗ ಅಕಸ್ಮಾತಾಗಿ ಬೀಜ ಸಿಕ್ಕಿತೆಂದರೆ ತಕ್ಷಣ ಬಿಸಾಡುತ್ತೇವೆ. ಆದರೆ ಈಗಲಾದರೂ ಬೀಜಗಳಿರುವ ದ್ರಾಕ್ಷಿಯನ್ನು ತಿನ್ನುವಾಗ ಒಂದೆರಡನ್ನು ಜಗಿಯಿರಿ. ಯಾಕೆಂದರೆ ಈ ಬೀಜಗಳಲ್ಲಿ ಆಲಿಗೋಮೆರಿಕ್ ಪ್ರೊಯಾಂತೋಸಯನಡಿನ್ ಎಂಬ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಪುಷ್ಕಳವಾಗಿ ಇರುತ್ತದೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

ಅದರಿಂದಾಗಿ ದ್ರಾಕ್ಷಿ ಬೀಜಗಳನ್ನು ಜಗಿದಿದ್ದೀರಾ ಎಂದರೆ ಕ್ಯಾನ್ಸರ್ ವ್ಯಾಧಿಯನ್ನು ದೂರ ಮಾಡಿಕೊಳ್ಳುತ್ತಿದ್ದೇವೆ ಎಂದರ್ಥ. ಈ ಬೀಜದಲ್ಲಿರುವ ಪ್ರೊಯಾಂತೋಸಯನಡಿನ್ ರಕ್ತನಾಳಗಳ ಕೊನೆ ಭಾಗದಲ್ಲಿರುವ ರಕ್ತಕೇಶ ನಾಳಿಕೆಗಳ ಅಂದರೆ ಕ್ಯಾಪಿಲ್ಲರೀಸ್ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ.

ಈ ಬೀಜಗಳಲ್ಲಿ ವಿಟಮಿನ್ ಇ, ಫ್ಲೇವನಾಯ್ಡ್, ಲಿನೊಲಿಕ್ ಆಸಿಡ್ ಪುಷ್ಕಳವಾಗಿ ಇರುತ್ತವೆ. ಫ್ಲೇವನಾಯ್ಡ್ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದ್ರೋಗವನ್ನು ದೂರ ಮಾಡುತ್ತದೆ. ಮಹಿಳೆಯರಲ್ಲಿ ಇನ್ನಷ್ಟು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಡಿಪ್ರೆಶನ್ ನಿವಾರಣೆಯಲ್ಲಿ ಈ ಬೀಜಗಳ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...