alex Certify ಇದು ಅಂತಿಂಥ ಟೇಬಲ್ ಅಲ್ಲ…! ಕುಳಿತಲ್ಲೇ ಪಾರ್ಟಿ ಮಾಡ್ತಾ ತಿರುಗಾಡೋ ಸ್ಪೆಷಲ್ ಟೇಬಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಅಂತಿಂಥ ಟೇಬಲ್ ಅಲ್ಲ…! ಕುಳಿತಲ್ಲೇ ಪಾರ್ಟಿ ಮಾಡ್ತಾ ತಿರುಗಾಡೋ ಸ್ಪೆಷಲ್ ಟೇಬಲ್

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗ್ತಾನೇ ಇರುತ್ತೆ. ಕೆಲ ವಿಡಿಯೋಗಳು ಮನಸ್ಸಿಗೆ ಖುಷಿ ಕೊಡುವ ವಿಡಿಯೋಗಳಾದರೆ, ಇನ್ನೂ ಕೆಲ ವಿಡಿಯೋಗಳು ಸಮಾಜದ ಕರಾಳ ಮುಖ ತೋರಿಸುವಂತಹ ವಿಡಿಯೋಗಳಾಗಿರುತ್ತೆ. ಆದರೆ ಈ ಬಾರಿ ವೈರಲ್ ಆಗಿರೋ ವಿಡಿಯೋ ಯುವಕರ ಕ್ರಿಯೆಟಿವಿಟಿ ಹೇಗ್ಹೇಗೆ ಇರುತ್ತೆ ಅಂತ ತೋರಿಸೋ ವಿಡಿಯೋ ಇದಾಗಿದೆ. ಈ ವಿಡಿಯೋವನ್ನ ಭಾರತದ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಅವರು ಕೂಡಾ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅದು 4 ಜನರ ಯುವಕರ ತಂಡ. ಅವರು ಪೆಟ್ರೋಲ್ ಹಾಕಿಸಿಕೊಳ್ಳುವುದಕ್ಕೆ ಪೆಟ್ರೋಲ್ ಬಂಕ್ ಒಂದಕ್ಕೆ ಹೋಗುತ್ತಾರೆ. ಆದರೆ ಅವರು ಹೋಗಿದ್ದ ರೀತಿ ಎಂಥವರು ಕೂಡಾ ಅಚ್ಚರಿ ಪಡುವ ಹಾಗಿದೆ. ಬಿಕಾಸ್ ಅವರು ಕಾರ್, ಬೈಕ್ ತೆಗೆದುಕೊಂಡು ಹೋಗಿರಲಿಲ್ಲ. ಎಲ್ಲಿ ಬೇಕಾದರೂ ಅಲ್ಲಿ ತೆಗೆದುಕೊಂಡು ಹೋಗಬಹುದಾದ ಡೈನಿಂಗ್ ಟೇಬಲ್ ತೆಗೆದುಕೊಂಡು ಹೋಗಿ. ಅದಕ್ಕೆ ಪೆಟ್ರೋಲ್ ತುಂಬಿಸಿಕೊಂಡು ಹೋಗಿದ್ದರು.

BIG BREAKING: ಪರಪ್ಪನ ಅಗ್ರಹಾರ ಜೈಲಧಿಕಾರಿ ರಂಗನಾಥ್ ಎತ್ತಂಗಡಿ

ಅಸಲಿಗೆ ಇದು ಡೈನಿಂಗ್ ಟೇಬಲ್‌ ಆಗಿದ್ದು ವಾಹನದಲ್ಲಿ ಅಳವಡಿಸಲಾಗುವ ಮೋಟಾರ್‌ನ್ನ ಇದಕ್ಕೆ ಜೋಡಿಸಲಾಗಿತ್ತು. ಆದರೆ ಈ ಮೋಟಾರ್ ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲ. ಬದಲಾಗಿ ಆ ಡೈನಿಂಗ್ ಟೇಬಲ್ ಒಂದೇ ತಿರುಗಾಡ್ತಿರೋ ಹಾಗೆ ಕಾಣಿಸುತ್ತಿತ್ತು. ಇನ್ನೂ ಅದೇ ಟೇಬಲ್ ಸುತ್ತಲು ಕುಳಿತ ಯುವಕು ಬಿಂದಾಸ್ ಆಗಿ ಪಾರ್ಟಿ ಮಾಡಿಕೊಂಡು ಎಂಜಾಯ್ ಮಾಡಿಕೊಂಡು ಹೋಗ್ತಿರೋ ರೀತಿ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಯತ್ನಗಳು ಆಗಾಗ ನಡೆಯುತ್ತಿರಬೇಕು ಅನ್ನೊ ಅಭಿಪ್ರಾಯವನ್ನ ಕೂಡಾ ಹೇಳಿದ್ಧಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...