alex Certify ಇಡ್ಲಿ ಜೊತೆ ‘ಕಡಲೆಬೀಜದ ಚಟ್ನಿ’ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡ್ಲಿ ಜೊತೆ ‘ಕಡಲೆಬೀಜದ ಚಟ್ನಿ’ ಮಾಡಿ ಸವಿಯಿರಿ

ಇಡ್ಲಿ ಮಾಡಿದಾಗ ರುಚಿಕರವಾದ ಚಟ್ನಿ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ತೆಂಗಿನಕಾಯಿ ಬಳಸದೇ ಮಾಡುವ ರುಚಿಕರವಾದ ಕಡಲೆಬೀಜದ ಚಟ್ನಿ ಇದೆ ಮಾಡಿ ರುಚಿ ನೋಡಿ.

½ ಕಪ್ ಕಡಲೆಬೀಜವನ್ನು ಹುರಿದುಕೊಳ್ಳಿ. ನಂತರ ಒಂದು ಪ್ಯಾನ್ ಗೆ 1 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ¼ ಟೀ ಸ್ಪೂನ್ ಜೀರಿಗೆ, ¼ ಟೀ ಸ್ಪೂನ್ ಉದ್ದಿನಬೇಳೆ ಹಾಕಿ ಅದು ಪರಿಮಳ ಬರುತ್ತಿದ್ದಂತೆ ಸಾಂಬಾರ ಈರುಳ್ಳಿ 4 ಹಾಕಿ ತುಸು ಫ್ರೈ ಮಾಡಿ.

ತದನಂತರ ಅದಕ್ಕೆ 3 ಒಣಮೆಣಸು, ¼ ಟೀ ಸ್ಪೂನ್ ಅಚ್ಚ ಖಾರದ ಪುಡಿ, ಸಣ್ಣ ತುಂಡು ಹುಣಸೆಹಣ್ಣು ಹಾಕಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ ಕಡಲೆಬೀಜ, ಉಪ್ಪು ನೀರು ಸೇರಿಸಿಕೊಂಡು ರುಬ್ಬಿಕೊಳ್ಳಿ. ಇಡ್ಲಿ, ದೋಸೆ ಮಾಡಿದಾಗ ಈ ಚಟ್ನಿ ಚೆನ್ನಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...