alex Certify ಇಂದು ಬಿಡುಗಡೆಯಾಗಲಿದೆ ʼಕ್ಷೇತ್ರಪತಿʼ ಚಿತ್ರದ ಮೊದಲ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ʼಕ್ಷೇತ್ರಪತಿʼ ಚಿತ್ರದ ಮೊದಲ ಹಾಡು

Naveen Shankar

ಇದೇ ತಿಂಗಳು ಆಗಸ್ಟ್ 18 ರಂದು ರಾಜ್ಯದ್ಯಂತ ತೆರೆ ಕಾಣಲಿರುವ ಕ್ಷೇತ್ರಪತಿ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ youtube  ಚಾನೆಲ್ ನಲ್ಲಿ ಇಂದು ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

‘ಪಲ್ಲಕ್ಕಿ’ ಎಂಬ ಜಾನಪದ ಸೊಬಗಿನ ಈ ಹಾಡಿಗೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ರವಿ  ಬಸ್ರೂರ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಶ್ರೀಕಾಂತ್ ಕಟಗಿ ನಿರ್ದೇಶನದ ಈ ಚಿತ್ರದಲ್ಲಿ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡಲಾಗಿದೆ. ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್, ನಾಟ್ಯ ರಂಗ, ರಾಹುಲ್ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದು, ಅರ್ಚನಾ ಜೋಯಿಸ್ ಪತ್ರಕರ್ತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...