alex Certify ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್

ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ & ಜೆರ್ರಿ’ ಚಿತ್ರದ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಈಗಾಗಲೇ ಈ ಸಿನಿಮಾದ ‘ಹಾಯಾಗಿದೆ ಎದೆಯೊಳಗೆ’ ಎಂಬ ಸಿದ್ ಶ್ರೀರಾಮ್ ಧ್ವನಿಯಲ್ಲಿ ಮೂಡಿಬಂದ ಹಾಡು ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿತ್ತು. ಟಾಲಿವುಡ್ ನ ಖ್ಯಾತ ಗಾಯಕ ಸಿದ್ ಶ್ರೀರಾಮ್ ಹಾಡಿರುವ ಎಲ್ಲಾ ಹಾಡುಗಳ ರೆಕಾರ್ಡ್ ಸೃಷ್ಟಿಸಿವೆ.

ರಾಜು ಶೇರಿಗಾರ್ ನಿರ್ಮಾಣದ ಈ ಚಿತ್ರದಲ್ಲಿ ನಿಶ್ಚಿತ್ ನಾಯಕನಾಗಿ ನಟಿಸಿದ್ದು, ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ಚಿತ್ರಾ ರಾವ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಾಲು ಸಾಲು ಹಾಡುಗಳು ಬಿಡುಗಡೆಯಾಗುತ್ತಿವೆ ಇದೀಗ ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ಹಾಡು ಗಾನಪ್ರಿಯರನ್ನು ಮೋಡಿ ಮಾಡಲು ಸಜ್ಜಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...