alex Certify ಇಂದು ಐರ್ಲ್ಯಾಂಡ್ ಹಾಗೂ ನಮೀಬಿಯಾ ತಂಡಕ್ಕೆ ʼಮಾಡು ಇಲ್ಲವೆ ಮಡಿʼ ಪಂದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಐರ್ಲ್ಯಾಂಡ್ ಹಾಗೂ ನಮೀಬಿಯಾ ತಂಡಕ್ಕೆ ʼಮಾಡು ಇಲ್ಲವೆ ಮಡಿʼ ಪಂದ್ಯ

ನಿನ್ನೆ ನಡೆದ ಐಸಿಸಿ ಟ್ವೆಂಟಿ ವರ್ಲ್ಡ್ ಕಪ್ ಸೂಪರ್ 12 ಆಯ್ಕೆಯ ಪಂದ್ಯದಲ್ಲಿ ಒಮನ್ ವಿರುದ್ಧ ಸ್ಕಾಟ್ಲೆಂಡ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸೂಪರ್ 12ಗೆ ಎಂಟ್ರಿ ಕೊಟ್ಟಿದೆ. ಗ್ರೂಪ್ ಎ ನಲ್ಲಿರುವ ಬಾಂಗ್ಲಾದೇಶ ಹಾಗೂ ಸ್ಕಾಟ್ಲೆಂಡ್ ತಂಡ ಸೂಪರ್‌ 12ನಲ್ಲಿ ಆಡಲು ಸಜ್ಜಾಗಿವೆ.

ಗ್ರೂಪ್ ಬಿನಲ್ಲಿ ಶ್ರೀಲಂಕಾ ತಂಡ ಈಗಾಗಲೇ ಸೂಪರ್‌ 12ಗೆ ಪ್ರವೇಶಿಸಿದ್ದು, ಇಂದು ನಡೆಯಲಿರುವ ಐರ್ಲೆಂಡ್ ಹಾಗೂ ನಮೀಬಿಯಾ ಪಂದ್ಯಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆದ್ದಿವೆ. ಗೆದ್ದ ತಂಡ ಸೂಪರ್‌ 12ಗೆ ಎಂಟ್ರಿ ಕೊಡಲಿದೆ. ಐರ್ಲೆಂಡ್ ತಂಡದಲ್ಲಿ ಅನುಭವಿ ಆಟಗಾರರು ಹೆಚ್ಚಾಗಿದ್ದು, ಇಂದು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...