ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾ ದಿನನಿತ್ಯವೂ ಡಯೆಟ್ ಮಾಡುವ ವ್ಯಕ್ತಿಗಳಿಗೆ ಈ ನ್ಯೂಸ್ ಫುಲ್ ಖುಷಿ ತರುತ್ತೆ. ಯಾಕಂದ್ರೆ ಇವತ್ತು ಅಂತಾರಾಷ್ಟ್ರೀಯ ನೋ ಡಯೆಟ್ ಡೇ !
ಅಂದ್ರೆ ಇಂದು ನೀವು ಮನಸೋ ಇಚ್ಛೆ ಇಷ್ಟಪಟ್ಟಿದ್ದನ್ನೆಲ್ಲಾ ಯಾವುದೇ ಕಟ್ಟಿಲ್ಲದೇ ತಿನ್ನುವ ದಿನ. ಡಯೆಟ್ ಅನ್ನೋ ಹೆಸರಿನಲ್ಲಿ ತಮ್ಮ ದೇಹದ ಆಕಾರದ ಬಗ್ಗೆ ಮುಜುಗರ ಪಟ್ಟುಕೊಳ್ಳದೇ ಆಹಾರ ಸೇವಿಸಲು ಪ್ರೇರೆಪಿಸುವುದು ಈ ದಿನದ ವಿಶೇಷವಾಗಿದೆ.
ಆರಂಭ ಆಗಿದ್ದೇ ಕುತೂಹಲಕಾರಿಯಾಗಿದೆ !
1992 ರಲ್ಲಿ ಇಂಗ್ಲೀಷ್ ಸ್ತ್ರೀವಾದಿ ಮೇರಿ ಇವಾನ್ಸ್ ಯಂಗ್ ಅವರು ಎಲ್ಲರೂ ತಮ್ಮ ದೇಹ ಹೇಗಿದೆಯೋ ಅದನ್ನು ಹಾಗೆಯೇ ಸ್ವೀಕರಿಸಲು ಜನರಲ್ಲಿ ಅರಿವು ಮೂಡಿಸಿದರು. ಇವಾನ್, ಅನರೇಕ್ಸಿಯಾ ಅಂದರೆ ತಿನ್ನದೇ ಇರುವ ಕಾಯಿಲೆಗೆ ಒಳಗಾಗಿದ್ದರು.
ಡಯೆಟ್ ಮೀತಿ ಮೀರಿ ಮಾನಸಿಕ ಕಾಯಿಲೆಗೆ ಒಳಗಾಗುವ ಸ್ಥಿತಿಯೇ ಅನರೇಕ್ಸಿಯಾ ಕಾಯಿಲೆ. ಈ ರೀತಿ ಬೇರೆಯವರು ಡಯೆಟ್ ಚಟ ಅಂಟಿಸಿಕೊಳ್ಳಬಾರದು ಎಂದು 1992 ರಲ್ಲಿ ಕೆಲವು ಮಹಿಳೆಯರೊಟ್ಟಿಗೆ ‘ನೋ ಡಯೆಟ್ ಡೇ’ ಅರಂಭವಾಯಿತು.
ನಕಲಿ ಡಯೆಟ್ ಬೇಡ !
ದೇಹದ ಆಕಾರ ಲೆಕ್ಕವಿಡದೇ ಇಷ್ಟಪಟ್ಟಿದ್ದನ್ನೆಲ್ಲಾ ತಿನ್ನಬೇಕು. ನಿಮ್ಮನ್ನು ನೀವು ಪ್ರೀತಿಸಬೇಕು. ಡಯೆಟ್ ಚಟವಾಗಬಾರದು ಎನ್ನುವ ಸಂದೇಶ ಈ ದಿನ ಸಾರುತ್ತದೆ. ಫಾಲ್ಸ್ ಡಯೆಟ್ ಗಳಿಂದ ಪುರುಷರು ಮತ್ತು ಮಹಿಳೆಯರನ್ನು ರಕ್ಷಿಸುವ ಸಲುವಾಗಿ ಈ ದಿನ ಜಾಗೃತಿ ಮೂಡಿಸಲಾಗುತ್ತದೆ. ಪ್ರತಿಯೊಬ್ಬರ ದೇಹ ವಿಭಿನ್ನ ಇದನ್ನು ಒಪ್ಪಿಕೊಳ್ಳಬೇಕು ಎನ್ನುವುದು ಅಂತಾರಾಷ್ಟ್ರೀಯ ನೋ ಡಯೆಟ್ ಡೇ ಉದ್ದೇಶವಾಗಿದೆ.
ಆದ್ದರಿಂದ ಇವತ್ತು ಡಯೆಟ್ ಗೆ ಬ್ರೇಕ್ ಹಾಕಿ ಒಳ್ಳೆಯ ಆಹಾರವನ್ನು ತಿಂದು ನಿಮ್ಮನ್ನು ನೀವು ಪ್ರೀತಿಸಿ.