alex Certify ಆಸ್ಕರ್ ಪ್ರಶಸ್ತಿ ರೇಸ್​ನಲ್ಲಿ ಮುಂದುವರಿದ ಜೈ ಭೀಮ್​ ಹಾಗೂ ಮರಕ್ಕರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಕರ್ ಪ್ರಶಸ್ತಿ ರೇಸ್​ನಲ್ಲಿ ಮುಂದುವರಿದ ಜೈ ಭೀಮ್​ ಹಾಗೂ ಮರಕ್ಕರ್​..!

ಟಿಜೆ ಜ್ಞಾನವೇಲ್​ ನಿರ್ದೇಶದನ ಸೂರ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಜೈ ಭೀಮ್​ ಕಳೆದ ವರ್ಷದ ನವೆಂಬರ್​ ತಿಂಗಳಿನಲ್ಲಿ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿತ್ತು.

ಈ ಸಿನಿಮಾವು ದೇಶಮಟ್ಟದಲ್ಲಿ ವ್ಯಾಪಕ ಚರ್ಚೆಯನ್ನೂ ಹುಟ್ಟು ಹಾಕಿತ್ತು. ಇದೀಗ ಈ ಸಿನಿಮಾವು 2022ನೇ ಸಾಲಿನ ಆಸ್ಕರ್​ ಬೆಸ್ಟ್​​ ಫೀಚರ್ ಫಿಲಂ ವಿಭಾಗಕ್ಕೆ ಶಾರ್ಟ್​ಲಿಸ್ಟ್​ ಆಗಿದೆ. ಜೈ ಭೀಮ್​ ಜೊತೆಯಲ್ಲಿ ಮೋಹನ್​ಲಾಲ್​ರ ಮರಕ್ಕರ್​​ ಕೂಡ ಶಾರ್ಟ್​ಲಿಸ್ಟ್​ ಆಗಿದೆ. ಅಂತಿಮ ನಾಮಿನೇಷನ್​​ ಫೆಬ್ರವರಿ 8ರಂದು ಘೋಷಣೆಯಾಗಲಿದೆ.

ಬುಡಕಟ್ಟು ಜನಾಂಗದವರ ಮೇಲೆ ನಡೆಯುವ ದೌರ್ಜನ್ಯದ ನೈಜ ಘಟನೆಗಳನ್ನು ಆಧರಿಸಿ ಜೈ ಭೀಮ್​ ಸಿನಿಮಾದ ಕತೆಯನ್ನು ಹೆಣೆಯಲಾಗಿತ್ತು. ಇದು 2021ನೇ ಸಾಲಿನ ತಮಿಳಿನ ಬೆಸ್ಟ್​ ಸಿನಿಮಾ ಎಂದು ಕರೆಯಬಹುದಾಗಿದೆ. ಈ ಸಿನಿಮಾದಲ್ಲಿ ನಟ ಸೂರ್ಯ, ಲಿಜೊಮೋಲ್​ ಜೋಸ್​ ಹಾಗೂ ಮಣಿಕಂದನ್​​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

94ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಯ್ಕೆಯಾದ ಏಕೈಕ ತಮಿಳು ಸಿನಿಮಾ ಜೈ ಭೀಮ್​ ಆಗಿದೆ. ವಿಶ್ವಾದ್ಯಂತ ಆಯ್ಕೆಯಾಗಿರುವ 276 ಚಲನಚಿತ್ರಗಳ ಪೈಕಿ ಜೈ ಭೀಮ್​ ಹಾಗೂ ಮಲಯಾಳಂ ಸಿನಿಮಾ ಮರಕ್ಕರ್​ : ಅರಬಿಕದಲಿಂತೆ ಸಿಂಹಂ ಭಾರತೀಯ ಸಿನಿಮಾಗಳಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...