alex Certify ಆಲೂಗೆಡ್ಡೆಯನ್ನು ಪ್ರತಿದಿನ ಸೇವಿಸಿದ್ರೂ ತೂಕ ಇಳಿಸಬಹುದು….! ಅದ್ಹೇಗೆ ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

 ಆಲೂಗೆಡ್ಡೆಯನ್ನು ಪ್ರತಿದಿನ ಸೇವಿಸಿದ್ರೂ ತೂಕ ಇಳಿಸಬಹುದು….! ಅದ್ಹೇಗೆ ಗೊತ್ತಾ……?

ಆಲೂಗಡ್ಡೆ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲೂ ಇದೆ. ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು  ನಿಲ್ಲಿಸುತ್ತಾರೆ. ಇದೇ ಕಾರಣಕ್ಕೆ ಆಲೂಗಡ್ಡೆಯಿಂದ್ಲೂ ದೂರವಿರ್ತಾರೆ. ಆದರೆ ಪ್ರತಿದಿನ ಆಲೂಗಡ್ಡೆ ತಿನ್ನುವ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಪಿಷ್ಟದಲ್ಲಿ ಸಮೃದ್ಧವಾಗಿರುವ ಆಲೂಗಡ್ಡೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಬೇಕೆಂದರೆ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ತಿನ್ನಬೇಕು. ಆಲೂಗಡ್ಡೆ ಕೂಡ ಅವುಗಳಲ್ಲೊಂದು. ಆಲೂಗಡ್ಡೆಯಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಆದರೆ ಬೇಗನೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ದೀರ್ಘಕಾಲದವರೆಗೂ ನಮಗೆ ಹಸಿವಾಗುವುದಿಲ್ಲ. ಉಳಿದವುಗಳಿಗೆ ಹೋಲಿಸಿದರೆ ನಾವು ಕಡಿಮೆ ತಿನ್ನುತ್ತೇವೆ. ಇದರಿಂದಾಗಿ ಬೇಗನೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಿ ತಿನ್ನುವುದು ಬಹಳ ಮುಖ್ಯ.

ಎಣ್ಣೆಯಲ್ಲಿ ಕರಿದ ಚಿಪ್ಸ್‌ ಅಥವಾ ಕರಿದ ಆಲೂಗಡ್ಡೆಯನ್ನು ತಿಂದರೆ ತೂಕ ಕಡಿಮೆಯಾಗುವುದಿಲ್ಲ. ಹಾಗಾಗಿ ಅದನ್ನು ಬೇಯಿಸಿಯೇ ತಿನ್ನಬೇಕು. ಬೇಯಿಸಿ ತಿಂದರೆ ಬೇಗನೆ ಹಸಿವಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ಇಚ್ಛಿಸುವವರು ಕಡಿಮೆ ಕ್ಯಾಲೋರಿ ಇರುವ ಭಾರವಾದ ಆಹಾರವನ್ನು ಸೇವಿಸುವುದು ಉತ್ತಮ. ಇದರಿಂದ ಕ್ಯಾಲೊರಿಗಳನ್ನು ಸುಲಭವಾಗಿ ಕಡಿಮೆ ಮಾಡಬಹುದು. ಆಲೂಗಡ್ಡೆ ತಿನ್ನುವುದರಿಂದ ಟೈಪ್ 2 ಡಯಾಬಿಟಿಸ್ ಬರುವ ಅಪಾಯವಿದೆ ಎನ್ನಲಾಗುತ್ತದೆ. ಆದರೆ ಮಧುಮೇಹ ರೋಗಿಗಳು ಆಲೂಗಡ್ಡೆಯನ್ನು ತಿನ್ನಬಹುದು ಮತ್ತು ತೂಕವನ್ನು ಕಳೆದುಕೊಳ್ಳಬಹುದು.

ಸಂಶೋಧನೆಯ ಸಮಯದಲ್ಲಿ, ಸಿಪ್ಪೆಯೊಂದಿಗೆ ಬೇಯಿಸಿದ ಆಲೂಗಡ್ಡೆಯನ್ನು 12 ರಿಂದ 24 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ನಂತರ ಮಧುಮೇಹ ರೋಗಿಗಳಿಗೆ ತಿನ್ನಲು ನೀಡಲಾಯಿತು. ತಂಪಾಗಿಸುವಿಕೆಯಿಂದಾಗಿ, ಆಲೂಗಡ್ಡೆಯಲ್ಲಿ ಫೈಬರ್ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವುದಿಲ್ಲ. ಆಲೂಗಡ್ಡೆಯನ್ನು ಈ ರೀತಿ ತಿನ್ನುವುದರಿಂದ ಮಧುಮೇಹ ರೋಗಿಗಳಿಗೆ ತೊಂದರೆಯಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...