alex Certify ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬೇಕು ದೇಸಿ ತುಪ್ಪ, ಚಳಿಗಾಲದಲ್ಲಿ ಅದನ್ನು ಬಳಸುವುದು ಹೀಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬೇಕು ದೇಸಿ ತುಪ್ಪ, ಚಳಿಗಾಲದಲ್ಲಿ ಅದನ್ನು ಬಳಸುವುದು ಹೀಗೆ

ದೇಸಿ ತುಪ್ಪವನ್ನು ನಾವೆಲ್ಲ ಅಡುಗೆಗೆ ಬಳಸುತ್ತೇವೆ. ಊಟಕ್ಕೂ ತುಪ್ಪ ಹಾಕಿಕೊಳ್ಳುತ್ತೇವೆ, ಸಿಹಿ ತಿನಿಸುಗಳಲ್ಲಿ ಬಳಕೆ ಮಾಡುತ್ತೇವೆ. ತುಪ್ಪ ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಕಾಯ್ದುಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ, ಕ್ಯಾಲೋರಿಗಳು ಮತ್ತು ಇತರ ಪೋಷಕಾಂಶಗಳು ಆರೋಗ್ಯಕ್ಕೆ ಪ್ರಯೋಜನಕಾರಿ.

ತುಪ್ಪವನ್ನು ಸೇವನೆ ಮಾಡುವುದು ಮಾತ್ರವಲ್ಲ ಅದನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು. ಇದು ಚಳಿಗಾಲದಲ್ಲಿ ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಊತದ ಸಮಸ್ಯೆಯನ್ನು ನಿವಾರಿಸುತ್ತದೆ. ತುಪ್ಪದಿಂದ ಇನ್ನೂ ಅನೇಕ ರೀತಿಯ ಪ್ರಯೋಜನಗಳಿವೆ.

1. ಸುಟ್ಟ ಗಾಯಗಳನ್ನು ಗುಣಪಡಿಸುತ್ತದೆ

ತುಪ್ಪ ನೈಸರ್ಗಿಕ ಔಷಧ ಅಂದ್ರೂ ತಪ್ಪಾಗಲಾರದು. ಇದನ್ನು ಬಿರು  ಬೇಸಿಗೆಯಲ್ಲೂ ಬಳಸಬಹುದು. ಕೆಲವೊಮ್ಮೆ ಸೂರ್ಯನ ಕಿರಣಗಳಿಂದ ಚರ್ಮದ ಮೇಲೆ ಗಾಯಗಳು ಅಥವಾ ಕಪ್ಪು ಕಲೆಗಳು ಉಂಟಾಗುತ್ತವೆ. ನೀವು ಮಲಗುವ ಮೊದಲು ಪ್ರತಿದಿನ ರಾತ್ರಿ ಸುಟ್ಟ ಸ್ಥಳದಲ್ಲಿ ತುಪ್ಪವನ್ನು ಲೇಪಿಸಿದರೆ, ಆ ಕಲೆ ಕೂಡ ಮಾಯವಾಗುತ್ತದೆ. ಇದಲ್ಲದೇ ತುಪ್ಪವನ್ನು ಮುಖಕ್ಕೂ ಹಚ್ಚಿಕೊಂಡು ಮಲಗಬಹುದು.

2. ಉರಿಯೂತ ಕಡಿಮೆ ಮಾಡುತ್ತದೆ

ಆಯುರ್ವೇದ ಔಷಧೀಯ ಗುಣಗಳು ತುಪ್ಪದಲ್ಲಿದ್ದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನು ಮುಖಕ್ಕೆ ಹಚ್ಚುವ ಮೊದಲು ನೀರಿನಿಂದ ಮುಖವನ್ನು ತೊಳೆದು ಸ್ವಚ್ಛವಾದ ಬಟ್ಟೆಯ ಸಹಾಯದಿಂದ ಒರೆಸಿಕೊಳ್ಳಿ. ತುಪ್ಪವನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಊತವಿರುವ ಜಾಗಕ್ಕೆ ಅನ್ವಯಿಸಿ. ದೇಹದ ಯಾವುದೇ ಭಾಗದಲ್ಲಿ ಊತವಿದ್ದರೂ ಇದನ್ನು ಹಚ್ಚಿಕೊಳ್ಳಬಹುದು.

3. ತುಟಿ ಮತ್ತು ಚರ್ಮದ ಸೋಂಕುಗಳಿಗೆ ಪರಿಹಾರ

ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ. ಕೆಲವೊಮ್ಮೆ ಗಾಯವಾಗಿ ರಕ್ತ ಬರಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ನೀವು ತುಟಿಗಳಿಗೆ ತುಪ್ಪವನ್ನು ಹಚ್ಚಿಕೊಳ್ಳಬೇಕು. ತುಟಿಗಳ ಒಡಕನ್ನು ಇದು ಕಡಿಮೆ ಮಾಡುತ್ತದೆ. ನಿಮಗೆ ಯಾವುದೇ ರೀತಿಯ ಚರ್ಮದ ಸೋಂಕು (ತುರಿಕೆ, ಕೆಂಪು, ಶುಷ್ಕತೆ) ಇದ್ದರೆ ತುಪ್ಪ ಅದನ್ನು ನಿವಾರಿಸುತ್ತದೆ. ತುಪ್ಪ ಚಳಿಗಾಲದಲ್ಲಿ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ನೀವು ಇದನ್ನು ಪ್ರತಿದಿನ ಮಲಗುವಾಗ ಚರ್ಮಕ್ಕೆ ಹಚ್ಚಿಕೊಂಡರೆ ಶುಷ್ಕ ಮತ್ತು ನಿರ್ಜೀವ ತ್ವಚೆಯಿಂದ ಮುಕ್ತಿ ದೊರೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...