alex Certify ಆರೋಗ್ಯಕರ ಸಿಹಿ ತಿಂಡಿ ‘ಸೋರೆಕಾಯಿ’ ಹಲ್ವಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಸಿಹಿ ತಿಂಡಿ ‘ಸೋರೆಕಾಯಿ’ ಹಲ್ವಾ

Image result for recipe-lauki-halwa-sweet food

ಹೊರಗಿನ ಸಿಹಿ ತಿಂಡಿಗಳಿಗಿಂತ ಮನೆಯಲ್ಲಿ ಸಿಹಿತಿಂಡಿ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯವಾಗಿ ಸೋರೆಕಾಯಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದ್ರೆ ಇದ್ರಲ್ಲಿ ಮಾಡಿದ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಸೋರೆಕಾಯಿ ಹಲ್ವಕ್ಕೆ ಬೇಕಾಗುವ ಪದಾರ್ಥ:

ತುರಿದಿರುವ 2 ಕಪ್ ಸೋರೆಕಾಯಿ

ತುಪ್ಪ ಮೂರು ಚಮಚ

ಏಲಕ್ಕಿ 4

ಸಕ್ಕರೆ ರುಚಿಗೆ ತಕ್ಕಷ್ಟು

ಹಾಲು 2 ಕಪ್

ಗೋಡಂಬಿ, ಒಣ ದ್ರಾಕ್ಷಿ

ಸೋರೆಕಾಯಿ ಹಲ್ವಾ  :  ನಾನ್ ಸ್ಟಿಕ್ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ತುರಿದ ಸೋರೆಕಾಯಿ ಹಾಕಿ ಒಂದೇಳು ನಿಮಿಷಗಳ ಕಾಲ ಬೇಯಿಸಿ. ನಂತ್ರ ಹಾಲು ಹಾಗೂ ಏಲಕ್ಕಿಯನ್ನು ಹಾಕಿ 10 ನಿಮಿಷಗಳವರೆಗೆ ಬೇಯಿಸಿ. ಸಕ್ಕರೆ ಹಾಕಿ ಒಂದೆರಡು ನಿಮಿಷ ಕೈ ಆಡಿಸಿ. ಸೋರೆಕಾಯಿ ಸಕ್ಕರೆ, ಹಾಲಿನ ಜೊತೆ ಸರಿಯಾಗಿ ಬೆಂದ ನಂತ್ರ ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...