alex Certify ಆರೇಂಜ್ ಸಿಪ್ಪೆ ಎಸೆಯುವ ಬದಲು ಈ ಸಿಂಪಲ್ ಆದ ಗೊಜ್ಜು ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೇಂಜ್ ಸಿಪ್ಪೆ ಎಸೆಯುವ ಬದಲು ಈ ಸಿಂಪಲ್ ಆದ ಗೊಜ್ಜು ಟ್ರೈ ಮಾಡಿ ನೋಡಿ

ಡಿಸೆಂಬರ್ ಬಂತೆಂದರೆ ಆರೇಂಜ್ ಹಣ್ಣುಗಳು ಎಲ್ಲೆಡೆ ಗಮನ ಸೆಳೆಯುತ್ತದೆ. ವಿಟಮಿನ್ ಸಿ ಆಗರ ಆರೇಂಜ್. ಸುಲಭವಾಗಿ ಸಿಪ್ಪೆ ಬಿಡಿಸಲು ಸಾಧ್ಯವಿರುವ ಹಣ್ಣು ಆರೇಂಜ್. ಮಕ್ಕಳಿಂದ ಮುದುಕರವರೆಗೂ ಈ ಆರೇಂಜ್ ಹಣ್ಣು ಎಲ್ಲರಿಗೂ ಪ್ರಿಯ.

ಆರೇಂಜ್ ಹಣ್ಣು ತಿಂದ ಮೇಲೆ ಸಿಪ್ಪೆ ಎಸೆಯುವವರೆ ಹೆಚ್ಚು. ಆದರೆ ಆರೇಂಜ್ ಸಿಪ್ಪೆ ಬಳಸಿ ಸುಲಭವಾಗಿ ಈ ಗೊಜ್ಜು ತಯಾರಿಸಿ ರುಚಿ ನೋಡಿ.

ಬೇಕಾಗುವ ಸಾಮಗ್ರಿ

ಚಿಕ್ಕದಾಗಿ ಹೆಚ್ಚಿಕೊಂಡ (ಕಟ್) ಆರೇಂಜ್ ಸಿಪ್ಪೆ – 1 ಬಟ್ಟಲು
ಹುಣಸೆ ರಸ – ದೊಡ್ಡ ಚಮಚ
ಸಾರಿನ ಪುಡಿ – 1 ಚಮಚ
ಬೆಲ್ಲ – ಸ್ವಲ್ಪ
ಅರಿಶಿನ – ಸ್ವಲ್ಪ
ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ಬೇಕಾದಷ್ಟು.

ಮಾಡುವ ವಿಧಾನ

ಬಾಣಲೆಗೆ ಕಟ್ ಮಾಡಿರುವ ಆರೇಂಜ್ ಸಿಪ್ಪೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಹುಣಸೆ ನೀರಿನಲ್ಲಿ 5 ನಿಮಿಷ ಬೇಯಿಸಿ. ನಂತರ ಸಾರಿನ ಪುಡಿ, ಅರಿಶಿನ, ಬೆಲ್ಲ ಹಾಗೂ ಉಪ್ಪು ಹಾಕಿ ಇನ್ನಷ್ಟು ಹೊತ್ತು ಬೇಯಿಸಿ ಗೊಜ್ಜಿನ ಹದ ಬಂದಾಗ ಕೆಳಗಿಳಿಸಿ.

ರುಚಿಯಾದ ಈ ಗೊಜ್ಜು ಬಿಸಿ ಬಿಸಿ ಅನ್ನ ಅಥವಾ ಮುದ್ದೆಗೆ ಒಳ್ಳೆಯ ಕಾಂಬಿನೇಶನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...