alex Certify ಆರು ಮಕ್ಕಳ ಮುಂದೆ ಮೂವರು ಮಹಿಳೆಯರನ್ನು ಏಕಕಾಲದಲ್ಲಿ ವಿವಾಹವಾದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರು ಮಕ್ಕಳ ಮುಂದೆ ಮೂವರು ಮಹಿಳೆಯರನ್ನು ಏಕಕಾಲದಲ್ಲಿ ವಿವಾಹವಾದ ಭೂಪ..!

Man marries 3 women after living-in with them for 15 years, fathering 6 kidsಮೂವರು ಮಹಿಳೆಯರೊಂದಿಗೆ 15 ವರ್ಷಗಳ ಕಾಲ ಲಿವ್-ಇನ್ ಸಂಬಂಧದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆಯೇ ವಿವಾಹವಾಗಿದ್ದಾನೆ. ಮಧ್ಯಪ್ರದೇಶದ ಗ್ರಾಮವೊಂದರ ಮಾಜಿ ಸರಪಂಚ್, ಇತ್ತೀಚೆಗೆ ಮೂವರು ಮಹಿಳೆಯರನ್ನು ಒಟ್ಟಿಗೆ ಮದುವೆಯಾಗಿದ್ದಾನೆ.

ಅಲಿರಾಜ್‌ಪುರ ಜಿಲ್ಲೆಯ ನಾನ್‌ಪುರ ನಿವಾಸಿಯಾಗಿರುವ 42 ವರ್ಷದ ಸಮರ್ಥ್ ಮೌರ್ಯ, ಕಳೆದ 15 ವರ್ಷಗಳ ಹಿಂದೆ ನಾನ್ಬಾಯಿ, ಮೇಳ ಮತ್ತು ಸಕ್ರಿ ಎಂಬ ಮಹಿಳೆಯರನ್ನು ಪ್ರೀತಿಸುತ್ತಿದ್ದರು. ಲಿವ್ ಇನ್ ಸಂಬಂಧದಲ್ಲಿದ್ದ ಆ ಮಹಿಳೆಯರಿಗೆ ಈಗಾಗಲೇ ಆರು ಮಕ್ಕಳನ್ನು ದಯಪಾಲಿಸಿದ್ದ. ಆದರೆ, ತನ್ನ ಬುಡಕಟ್ಟು ಸಮುದಾಯದ ಸಾಮಾಜಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡದ ಕಾರಣ ಅಂತಿಮವಾಗಿ 2022ರ ಏಪ್ರಿಲ್ 30 ರಂದು ಮೂವರು ಮಹಿಳೆಯರನ್ನು ವಿವಾಹವಾಗಿದ್ದಾನೆ.

ಮೂವರ ಜೊತೆ ಲಿವ್-ಇನ್ ಸಂಬಂಧಗಳು ಪ್ರಾರಂಭವಾದಾಗ ತನ್ನ ಸ್ಥಿತಿಗತಿ ಉತ್ತಮವಾಗಿರಲಿಲ್ಲ. ಮೂರೂ ಸಂಬಂಧಗಳಿಂದ ಮಕ್ಕಳನ್ನು ಹೊಂದಿದ್ದರೂ, ಅವರನ್ನು ವಿವಾಹವಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಇದೀಗ ತಾನು ಮೂವರ ಜೊತೆಯೂ ವಿವಾಹವಾಗಿದ್ದಾಗಿ ತಿಳಿಸಿದ್ದಾನೆ.

2003 ರಲ್ಲಿ ತನ್ನ ಮೊದಲ ಪ್ರೇಯಸಿಯ ಜೊತೆಗೆ ಮೌರ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೆ, ಮತ್ತಿಬ್ಬರು ಜೊತೆಗಾತಿಯರು ಸಹ ಕಳೆದ 15 ವರ್ಷಗಳಿಂದ ಅವರೊಂದಿಗೆ ವಾಸಿಸುತ್ತಿದ್ದುದ್ದಾಗಿ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...