alex Certify ಆನ್‌ಲೈನ್‌ಲ್ಲಿ ಆರ್ಡರ್ ಮಾಡಿದ್ದ ಭೂಪನೊಬ್ಬ ಕೊಟ್ಟ ಅಡ್ರೆಸ್ ಓದಿ ನಕ್ಕು-ನಕ್ಕು ಸುಸ್ತಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ಲೈನ್‌ಲ್ಲಿ ಆರ್ಡರ್ ಮಾಡಿದ್ದ ಭೂಪನೊಬ್ಬ ಕೊಟ್ಟ ಅಡ್ರೆಸ್ ಓದಿ ನಕ್ಕು-ನಕ್ಕು ಸುಸ್ತಾದ ನೆಟ್ಟಿಗರು

ಇದು ಇಂಟರ್ನೆಟ್ ಯುಗ, ಕೈಯಲ್ಲಿ ಮೊಬೈಲ್, ಅದರಲ್ಲಿ ಇಂಟರ್ನೆಟ್ ಕನೆಕ್ಷನ್‌ ಒಂದಿದ್ದರೆ ಸಾಕು, ಕುಳಿತಲ್ಲೇ ಕೆಲಸ ಮಾಡಿ ಮುಗಿಸೋವಂತಹ ಜಮಾನಾ ಇದು. ಇಂದಿನ ಯುವಪೀಳಿಗೆಯವರು ಈ ಇಂಟರ್‌ನೆಟ್‌ಗೆ ಎಷ್ಟು ದಾಸರಾಗಿ ಬಿಟ್ಟಿದ್ದಾರೆ ಅಂದ್ರೆ, ಏನಾದ್ರೂ ಬೇಕಂದ್ರೆ ಸಾಕು, ಕೈಗೆ ಮೊಬೈಲ್ ಹಿಡ್ಕೊಂಡು ಆರ್ಡರ್ ಮಾಡೇಬಿಡ್ತಾರೆ.

ಆನ್‌ಲೈನ್‌ನಲ್ಲಿ ಏನೇ ಆರ್ಡರ್ ಮಾಡಿದ್ರು, ಅದು ನಿಮ್ಮ ತನಕ ತಲುಪಬೇಕಂದ್ರೆ ಅಲ್ಲಿ ವಿಳಾಸ ಕರೆಕ್ಟಾಗಿ ನಮೂದಿಸಿರಬೇಕು. ಮನೆ ನಂಬರ್, ರಸ್ತೆ, ಕಾಲೋನಿ, ಲ್ಯಾಂಡ್‌ಮಾರ್ಕ್ ಎಲ್ಲವೂ ಸರಿಯಾಗಿ ಬರೆದ್ರೆ ಮಾತ್ರ, ನೀವು ಆರ್ಡರ್ ಮಾಡಿದ್ದು, ಸುರಕ್ಷಿತವಾಗಿ ಅಷ್ಟೆ ಬೇಗ ತಲುಪೋದಕ್ಕೆ ಸಾಧ್ಯ. ಆದರೆ ಕೆಲ ಮಹಾನುಭಾವರಿರ್ತಾರೆ. ಅಲ್ಲೂ ತಮ್ಮ ಕ್ರಿಯೆಟಿವಿಟಿ ತೋರಿಸಿಕೊಳ್ತಿರ್ತಾರೆ. ಅಂಥ ಫನ್ನಿ ಅಷ್ಟೆ ಇಂಟ್ರಸ್ಟಿಂಗ್ ಆಗಿರುವ ವಿಳಾಸ ಬರೆದ ಶೈಲಿಯೊಂದು ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇತ್ತಿಚೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡುವಾಗ ಗ್ರಾಹಕನೊಬ್ಬ ಕೊಟ್ಟಿರುವ ಅಡ್ರೆಸ್ ಇದು. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಗ್ರಾಹಕ ಬರೆದಿದ್ದ ಅತ್ಯಂತ ಉದ್ದದ ವಿಳಾಸ ಇದಾಗಿದೆ. ಇದನ್ನ ಒಂದು ಸಲ ಓದಿದ್ರೆ ತಲೆಯೇ ಸುತ್ತು ಬರುತ್ತೋ ಏನೋ? ಇದೇ ಅಡ್ರೆಸ್ ಬರೆಯುವ ಪರಿ ಈಗ ವೈರಲ್ ಆಗಿದೆ. ನೆಟ್ಟಿಗರು ಇದನ್ನ ಓದಿ ಎಂಜಾಯ್ ಮಾಡ್ತಿದ್ದಾರೆ. ಈ ಪಾರ್ಸೆಲ್ ತಲುಪಿಸುವಾಗ ಡಿಲೆವರಿ ಬಾಯ್ ಅದೆಷ್ಟು ತಲೆ ಕೆಡಿಸಿಕೊಂಡಿದ್ನೋ ಏನೋ ಅಂತ ಕೆಲವರು ತಮಾಷೆನೂ ಮಾಡ್ತಿದ್ದಾರೆ.

ಆ ವಿಳಾಸ ಹೀಗಿದೆ; “ ಹೆಸರು ಭಿಖಾರಾಮ್, ಭಿಖಾರಾಮ್ ಹರಿಸಿಂಗ್ ನಗರ ಗಿಲಾಕೋರ್, ಹಳ್ಳಿಯಿಂದ ಒಂದು ಕಿಲೋಮೀಟರ್ ಮೊದಲು ನಮ್ಮ ಹೊಲದ ಗೇಟ್ ರೈಟ್ ಸೈಡ್. ಕಬ್ಬಿಣದ ಗೇಟ್ ಇದೆ. ಅದೇ ಗೇಟ್ ಹತ್ತಿರದ ಬಳಿ ಇನ್ನೊಂದು ಚಿಕ್ಕ ಗೇಟ್ ಇದೆ. ಅದೇ ಗೇಟ್ಗೆ ಕಪ್ಪು ಉಂಗುರವನ್ನ ಹಾಕಲಾಗಿದೆ. ಅಲ್ಲಿ ಬಂದು ನನ್ನನ್ನ ಕರೆಯಿರಿ. ನಾನು ನಿಮ್ಮ ಮುಂದೆ ಬರುತ್ತೇನೆ.“ ಈ ವಿಳಾಸ ಓದ್ತಿದ್ರೆ ನಗು ಬರದೇ ಇರುತ್ತಾ?

ಹೀಗೆ ತಮಾಷೆಯಿಂದ ಕೂಡಿದ ವಿಳಾಸದ ಪೋಸ್ಟ್‌ನ್ನ@Nishantchant ಅವರು ತಮ್ಮ ಟ್ಟಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕ್ಯಾಪ್ಷನ್‌ನಲ್ಲಿ “ ಡಿಲೆವರಿ ಹುಡುಗ ಸಾಯೋ ತನಕ ಈ ಅಡ್ರೆಸ್ ಮರೆಯೊಲ್ಲ“ ಬರೆದಿದ್ದಾರೆ. ಈಗಾಗಲೇ ಈ ಪೋಸ್ಟ್‌ನ ಸಾವಿರಕ್ಕೂ ಹೆಚ್ಚು ವೀಕ್ಷಿಸಿದ್ದಾರೆ. ಕಾಮೆಂಟ್‌ಗಳು ರಾಶಿ-ರಾಶಿಯಾಗಿ ಬರುತ್ತಲೇ ಇದೆ.

— Nishant 🇮🇳 (@Nishantchant) January 13, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...