alex Certify ಆತ್ಮಗಳ ಓಡಾಟವನ್ನೂ ಗುರುತಿಸುತ್ತಾ ಟೆಸ್ಲಾ ಕಾರು…..? ಬೆಚ್ಚಿಬೀಳಿಸುವಂತಹ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಗಳ ಓಡಾಟವನ್ನೂ ಗುರುತಿಸುತ್ತಾ ಟೆಸ್ಲಾ ಕಾರು…..? ಬೆಚ್ಚಿಬೀಳಿಸುವಂತಹ ವಿಡಿಯೋ ವೈರಲ್

ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್​ ಇವಿ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ. ಸ್ವಯಂ ಚಾಲನಾ ಸಾಮರ್ಥ್ಯವನ್ನು ಹೊಂದಿರುವ ಟೆಸ್ಲಾ ಕಾರುಗಳು ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿವೆ.

ಇದರ ಜೊತೆಯಲ್ಲಿ ಟೆಸ್ಲಾಗೆ ಇನ್ನೂ ಕೆಲವು ವೈಶಿಷ್ಟ್ಯಗಳಿದ್ದು ಇದು ಆರನೇ ಇಂದ್ರಿಯವನ್ನು ಹೊಂದಿದೆ ಹಾಗೂ ಇದು ಆತ್ಮಗಳನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮಾತುಗಳು ನಿಮಗೆ ಹುಬ್ಬೇರಿಸುವಂತೆ ಮಾಡಬಹುದು. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕಾರು ಸ್ಮಶಾನದ ಬಳಿ ನಿಲ್ಲುತ್ತದೆ. ಮೊದಲು ಕಾರಿನ ಕ್ಯಾಮರಾವು ಎಲ್ಲಾ ಸಮಾಧಿಗಳತ್ತ ಫೋಕಸ್​ ಮಾಡಿದೆ. ಪರದೆಯ ಮೇಲೆ ಸಾಕಷ್ಟು ಜನರು ಇರುವುದು ಕಾಣುತ್ತದೆ. ಆದರೆ ಅಸಲಿಗೆ ಸಮಾಧಿ ಇರುವಲ್ಲಿ ಯಾವ ವ್ಯಕ್ತಿಯೂ ಇದ್ದಿರಲಿಲ್ಲ.

ಟೆಸ್ಲಾ ಕಾರು ಚಾಲಕರಿಗೆ ಇನ್ನೂ ಆಶ್ಚರ್ಯ ಎನಿಸುವಂತೆ ಆ ಎಲ್ಲಾ ಆತ್ಮಗಳು ತಮ್ಮಷ್ಟಕ್ಕೆ ತಾವೇ ತಿರುಗುತ್ತಾ ಜಾಗವನ್ನು ಬದಲಾಯಿಸುವುದು ಸಹ ಗಮನಕ್ಕೆ ಬಂದಿದೆ. ಕ್ಯಾಲಿಫೋರ್ನಿಯಾದ ವೆಸ್ಟ್ ಸೈಡ್ ಸ್ಮಶಾನ, ಟಾಫ್ಟ್ ಸ್ಥಳ ನಿರ್ಜನವಾಗಿದ್ದರಿಂದ ಕಾರಿನಲ್ಲಿದ್ದವರು ಗಾಬರಿಗೊಳಗಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...