alex Certify ಆಕಸ್ಮಿಕ ಗುಂಡಿನ ದಾಳಿಗೆ ಬಲಿಯಾದ ಎಲೆಕ್ಷನ್ ಡ್ಯೂಟಿಯಲ್ಲಿದ್ದ ಪೊಲೀಸ್ ಸಿಬ್ಬಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಸ್ಮಿಕ ಗುಂಡಿನ ದಾಳಿಗೆ ಬಲಿಯಾದ ಎಲೆಕ್ಷನ್ ಡ್ಯೂಟಿಯಲ್ಲಿದ್ದ ಪೊಲೀಸ್ ಸಿಬ್ಬಂದಿ….!

ಮಣಿಪುರದಲ್ಲಿ ಮೊದಲನೇ ಹಂತದ ಚುನಾವಣೆಯ ಆರಂಭದಲ್ಲೆ ಸಾಕಷ್ಟು ಹಿಂಸಾಚಾರಗಳ ವರದಿಯಾಗಿದೆ. ಚುನಾವಣೆಗು ಮುನ್ನ ಬಾಂಬ್ ಸ್ಪೋಟದಿಂದ ಹಿಡಿದು ಅಭ್ಯರ್ಥಿ ಒಬ್ಬರ ಮೇಲೆ ಕೊಲೆ ಪ್ರಯತ್ನ ಕೂಡ ನಡೆದಿದೆ. ಇಂತಹ ರಾಜ್ಯದಲ್ಲಿ ಚುನಾವಣೆಯ ದಿನದಂದೆ ಮತಗಟ್ಟೆಯ ರಕ್ಷಣೆಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಆಕಸ್ಮಿಕ ಗುಂಡಿನ ದಾಳಿಗೆ ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.

ಈ ವಿಚಾರವನ್ನು ದೃಢೀಕರಿಸಿರುವ ರಾಜ್ಯದ ಮುಖ್ಯ ಚುನಾವಣಾ ಕಚೇರಿಯ,‌ ಸಿಇಒ ರಾಜೇಶ್ ಅಗರ್ವಾಲ್ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಮವಾರ ಚುನಾವಣಾ ಕರ್ತವ್ಯದಲ್ಲಿದ್ದ ಮಣಿಪುರ ಪೊಲೀಸ್ ಸಿಬ್ಬಂದಿಯೊಬ್ಬರು ಚುನಾವಣೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಈ ಸಾವಿಗೆ ಬೇರೆ ಯಾರೋ ಅಲ್ಲಾ ಅವರೇ ಕಾರಣವಾಗಿರಬಹುದು ಎಂದು ಅಗರ್ವಾಲ್ ಶಂಕಿಸಿದ್ದಾರೆ. ಏಕೆಂದರೆ ಅವರ ಸರ್ವೀಸ್ ರೈಫಲ್‌ನಿಂದ ಬಂದ ಗುಂಡಿನಿಂದಲೆ ಅವರು ಸಾವನ್ನಪ್ಪಿದ್ದಾರೆ. ಹೀಗಾಗಿ ಈ ಸಾವು ಆಕಸ್ಮಿಕ ಫೈಯರ್ನಿಂದ ಸಂಭವಿಸಿರಬಹುದು ಎಂದಿದ್ದಾರೆ.

ಮತ್ತೆ ಬೆಲೆ ಏರಿಕೆ ಬಿಸಿ: ನಾಳೆಯಿಂದಲೇ ದುಬಾರಿ ದುನಿಯಾ; ಹಾಲಿನ ದರ ಹೆಚ್ಚಳ, ಅಮುಲ್ ಹಾಲು ಲೀಟರ್ ಗೆ 2 ರೂ. ಏರಿಕೆ

ಚುರಚಂದಪುರ ಜಿಲ್ಲೆಯ ತಿಪೈಮುಖ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿಯನ್ನು ಕಾಕ್ಚಿಂಗ್ ಜಿಲ್ಲೆಯ ನಿವಾಸಿ ನೌರೆಮ್ ಇಬೋಚೌಬಾ ಎಂದು ಗುರುತಿಸಲಾಗಿದೆ.‌

ಚುನವಣಾಧಿಕಾರಿ, ಅಗರ್ವಾಲ್ ಅವರು ಪೊಲೀಸ್ ಸಿಬ್ಬಂದಿಯ ಸಾವಿಗೆ ಸಂತಾಪ ಸೂಚಿಸಿದ್ದು. ಅವರ ದೇಹವನ್ನು ಇಂಫಾಲಾಗೆ ವಿಮಾನದಲ್ಲಿ ರವಾನಿಸಲಾಗಿದ್ದು, ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...