alex Certify ಅವೈಜ್ಞಾನಿಕ ಕಾಮಗಾರಿಯಿಂದ ಭೀಕರ ಸರಣಿ ಅಪಘಾತ; ನಡುರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದ ಆಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವೈಜ್ಞಾನಿಕ ಕಾಮಗಾರಿಯಿಂದ ಭೀಕರ ಸರಣಿ ಅಪಘಾತ; ನಡುರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದ ಆಟೋ

ತುಮಕೂರು: ಚಲಿಸುತ್ತಿದ್ದ ಆಟೋ ನೋಡ ನೋಡುತ್ತಿದ್ದಂತೆ ನಡು ರಸ್ತೆಯಲ್ಲಿಯೇ ಪಲ್ಟಿಯಾಗಿ ಬಿದ್ದಿದ್ದು, ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದ ಘಟನೆ ತುಮಕೂರು ಜಿಲ್ಲೆಯ ಮೇಳಕೋಟೆ ಮುಖ್ಯರಸ್ತೆಯಲ್ಲಿ ನಡೆದಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಶರೇಂಜ್ ಗಾಯಗೊಂಡಿರುವ ಆಟೋ ಚಾಲಕ.

ಜಲೇಬಿ ಬೇಬಿ ಹಾಡಿಗೆ ಕುಣಿದು ಕುಪ್ಪಳಿಸಿದ ವಧು….!

ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿ ಪರಿಣಾಮ ಆಟೋ ನಡುರಸ್ತೆಯಲ್ಲಿಯೇ ಪಲ್ಟಿಯಾಗಿದ್ದು, ಪಲ್ಟಿಯಾದ ಆಟೋಗೆ ಬೈಕ್ ಡಿಕ್ಕಿಹೊಡೆದಿದೆ. ಬೈಕ್ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಒಂದೆಡೆ ಮಳೆಯ ಅಬ್ಬರ, ಇನ್ನೊಂದೆಡೆ ಅವೈಜ್ಞಾನಿಕ ರಸ್ತೆ ನಡುವೆ ನಿರ್ಮಿಸಿದ್ದ ಡ್ರೈನೇಜ್ ಕ್ಯಾಪ್. ಡ್ರೈನೇಜ್ ಕ್ಯಾಪ್ ಇರುವುದು ಕಾಣದೇ ಆಟೋ ಚಾಲಕ ಆಟೊ ಓಡಿಸಿದ್ದಾನೆ. ಆಟೋ ಪಲ್ಟಿಯಾಗಿ ಬಿದ್ದಿದ್ದು, ಇದೇವೇಳೆ ವೇಗವಾಗಿ ಬಂದ ಬೈಕ್ ಕೂಡ ಆಟೋಗೆ ಡಿಕ್ಕಿ ಹೊಡೆದಿದೆ. ಅವೈಜ್ಞಾನಿಕ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...