alex Certify ಜಲೇಬಿ ಬೇಬಿ ಹಾಡಿಗೆ ಕುಣಿದು ಕುಪ್ಪಳಿಸಿದ ವಧು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲೇಬಿ ಬೇಬಿ ಹಾಡಿಗೆ ಕುಣಿದು ಕುಪ್ಪಳಿಸಿದ ವಧು….!

ಭಾರತೀಯ ವಿವಾಹ ಸಂಪ್ರದಾಯ, ತಮಾಷೆ ಹಾಗೂ ಮನರಂಜನೆಯಿಂದ ಕೂಡಿರುತ್ತದೆ. ಇತ್ತೀಚೆಗಂತೂ ಇಂಟರ್ನೆಟ್ ದೇಸಿ ವಿವಾಹದ ವಿಡಿಯೋಗಳಿಂದ ತುಂಬಿದೆ. ಅಂತಹ ಒಂದು ಅದ್ಭುತ ನೃತ್ಯ ಪ್ರದರ್ಶನವು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ.

ಹೌದು, ಇದೀಗ ವೈರಲ್ ಆದ ವಿಡಿಯೋದಲ್ಲಿ ವಧುವಿನ ಸಹೋದರಿಯರು ಮತ್ತು ಸ್ನೇಹಿತರು ಬಹಳ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಸುಂದರವಾದ ಲೆಹೆಂಗಾಗಳನ್ನು ಧರಿಸಿರುವ ವಧುವಿನ ತಂಡವು, ತೇಶರ್ ಅವರ ಜನಪ್ರಿಯ ಹಾಡಾದ ಜಲೇಬಿ ಬೇಬಿಗೆ ನೃತ್ಯ ಮಾಡುತ್ತಾ ಆಕರ್ಷಕವಾದ ಚಲನೆಗಳನ್ನು ಪ್ರದರ್ಶಿಸುತ್ತದೆ. ಅವರು ಬಹಳ ಉತ್ಸಾಹದಿಂದ ಹಾಡಿಗೆ ಡಾನ್ಸ್ ಮಾಡುತ್ತಿದ್ದರೆ, ಅತಿಥಿಗಳು ಅವರನ್ನು ಹುರಿದುಂಬಿಸಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ವಧುವಿನ ತಂಡದ ನೃತ್ಯ ಕಂಡು ನೆಟ್ಟಿಗರು ನಿಬ್ಬೆರಗಾಗಿದ್ದಾರೆ. ಹೆಣ್ಮಕ್ಕಳ ನೃತ್ಯಕ್ಕೆ ಇನ್ಸ್ಟಾಗ್ರಾಂ ಬಳಕೆದಾರರು ಮನಸೂರೆಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಕಾಮೆಂಟ್ ವಿಭಾಗವನ್ನು ಪ್ರೀತಿ ಮತ್ತು ಹೃದಯದ ಎಮೋಜಿಗಳಿಂದ ತುಂಬಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...