alex Certify ಅಲ್ಸರ್ ಸಮಸ್ಯೆಗೆ ಇದೆ ಮನೆಯಲ್ಲೇ ʼಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಸರ್ ಸಮಸ್ಯೆಗೆ ಇದೆ ಮನೆಯಲ್ಲೇ ʼಮದ್ದುʼ

ಅಲ್ಸರ್ ನಿರ್ಲಕ್ಷಿಸಿದರೆ ಗಂಭೀರ ಸಮಸ್ಯೆಯಾಗಿ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಆದ್ದರಿಂದ ಆರಂಭಿಕ ಹಂತದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಹಣ್ಣು ತರಕಾರಿಗಳ ಮೂಲಕ ಸಮಸ್ಯೆಯಿಂದ ಮುಕ್ತರಾಗಬಹುದು.

* ಕೆನೆ ರಹಿತ ಸಕ್ಕರೆ ಇಲ್ಲದ ತಂಪಾದ ಹಾಲಿನ ಸೇವನೆಯು ನೋವನ್ನು ಕಡಿಮೆ ಮಾಡುವುದಲ್ಲದೆ ಅಲ್ಸರ್ ನ ತೀವ್ರತೆಯನ್ನು ಕಮ್ಮಿ ಮಾಡುತ್ತದೆ.

* ಮೇಕೆಯ ಹಾಲು ಅಲ್ಸರ್ ಗುಣ ಪಡಿಸುವಲ್ಲಿ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ.

* ಎಲೆಕೋಸಿನ ರಸ ಅಥವಾ ಕ್ಯಾರೆಟ್ ರಸದ ಸೇವನೆ ಅಲ್ಸರ್ ಅನ್ನು ಗುಣಪಡಿಸುತ್ತದೆ.

* ಕ್ಯಾರೆಟ್ ರಸಕ್ಕೆ ಬೀಟ್ರೂಟ್ ಅಥವಾ ಸೌತೆಕಾಯಿ ರಸವನ್ನು ಸೇರಿಸಿ ಕುಡಿಯಬಹುದು.

* ಹೊಟ್ಟೆ ನೋವಿನ ಸಂದರ್ಭದಲ್ಲಿ ಹೊಟ್ಟೆಗೆ ಬಿಸಿ ನೀರಿನ ಪಟ್ಟಿಯನ್ನು ಹಾಕಬೇಕು. ಬಿಸಿಯ ಉಷ್ಣಾಂಶವು 120 ಡಿಗ್ರಿ ಫ್ಯಾರನ್ ಹೀಟ್ ಇರಬೇಕು.

* ಬಾದಾಮಿ ಬೀಜಗಳನ್ನು ನೆನೆಸಿಟ್ಟು ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಹಿಂಡಿ ತೆಗೆದ ಬಾದಾಮಿ ಹಾಲು ಕುಡಿಯಬೇಕು.

* ಬಾಳೆಹಣ್ಣಿನ ನಿಯಮಿತ ಸೇವನೆ ಅಲ್ಸರ್ ಗಾಯ ಗುಣವಾಗಲು ನೆರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...