alex Certify ಅಲ್ಲು ಅರ್ಜುನ್‍ರ ಶ್ರೀವಲ್ಲಿ ಹಾಡಿಗೆ ಸ್ಟೆಪ್ಸ್ ಹಾಕಿದ ರಾನು ಮೊಂಡಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಲು ಅರ್ಜುನ್‍ರ ಶ್ರೀವಲ್ಲಿ ಹಾಡಿಗೆ ಸ್ಟೆಪ್ಸ್ ಹಾಕಿದ ರಾನು ಮೊಂಡಾಲ್

ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಚಿತ್ರ ಭಾರತದಲ್ಲಿ ಭಾರಿ ಯಶಸ್ಸನ್ನು ಗಳಿಸಿದೆ. ಸಿನಿಮಾದ ರೋಮಾಂಚನಕಾರಿ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಸಿನಿಮಾದ ಶ್ರೀವಲ್ಲಿ ಹಾಡಿಗೆ ಹಲವಾರು ಮಂದಿ ನೃತ್ಯ ಮಾಡಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಸದ್ಯ ಭಾರಿ ಕ್ರೇಜ್ ಹುಟ್ಟುಹಾಕಿದೆ. ಇದೀಗ ಈ ಹಾಡಿಗೆ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ಅವರು ನೃತ್ಯ ಮಾಡಿದ್ದು, ವೈರಲ್ ಆಗಿದೆ. ವಿಡಿಯೋದಲ್ಲಿ, ಮೊಂಡಲ್ ತನ್ನ ಕೈಯಲ್ಲಿ ಕೋಲು ಹಿಡಿದುಕೊಂಡು ಶ್ರೀವಲ್ಲಿ ಹಾಡಿನ ಸ್ಟೆಪ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಅವರಿಗೆ ಸರಿಯಾಗಿ ಹೆಜ್ಜೆಗಳನ್ನು ಹಾಕಲು ಸಾಧ್ಯವಾಗಲಿಲ್ಲ.

ರಾನು ಮೊಂಡಲ್ ಅವರು ಸ್ಟೆಪ್ಸ್ ಹಾಕಿರುವ ದೃಶ್ಯದ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದ್ದು, 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಆಕೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಟ್ರೋಲ್ ಮಾಡಿ ಗೇಲಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...