alex Certify ಅಮೆರಿಕ ಸೇನೆಯಲ್ಲಿರುವ ಭಾರತೀಯ ಮೂಲದ ವ್ಯಕ್ತಿಗೆ ‘ತಿಲಕ’ ಧರಿಸಲು ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಸೇನೆಯಲ್ಲಿರುವ ಭಾರತೀಯ ಮೂಲದ ವ್ಯಕ್ತಿಗೆ ‘ತಿಲಕ’ ಧರಿಸಲು ಅನುಮತಿ

ಅಮೆರಿಕದ ಏರ್​ಫೋರ್ಸ್​ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ದರ್ಶನ್​ ಶಾರಿಗೆ ಕರ್ತವ್ಯದ ಸಮಯದಲ್ಲಿಯೂ ತಿಲಕವನ್ನು ಧರಿಸಲು ಅನುಮತಿ ನೀಡಲಾಗಿದೆ.

ಫ್ರಾನ್ಸಿಸ್​ಇ ವಾರನ್​ ಏರ್​​ಫೋರ್ಸ್​ನಲ್ಲಿ ಟೆಕ್ನಿಷಿಯನ್​ ಆಗಿರುವ ದರ್ಶನ್​ ಶಾ 2020ರಿಂದಲೂ ತಿಲಕವನ್ನು ಧರಿಸಲು ಅನುಮತಿ ನೀಡುವಂತೆ ಮನವಿ ಮಾಡುತ್ತಲೇ ಇದ್ದರು. ಕೊನೆಗೂ ಇವರಿಗೆ ಫೆಬ್ರವರಿ ತಿಂಗಳಲ್ಲಿ ಕರ್ತವ್ಯದ ಸಂದರ್ಭದಲ್ಲಿ ತಿಲಕ ಧರಿಸಲು ಅನುಮತಿ ನೀಡಲಾಗಿದೆ.

ಹಿಂದೂ ಕುಟುಂಬದಲ್ಲಿ ಜನಿಸಿರುವ ದರ್ಶನ್​ ಶಾ, 2020ರ ಜೂನ್​ ತಿಂಗಳಲ್ಲಿ ಮಿಲಿಟರಿ ತರಬೇತಿಗೆ ಹಾಜರಾಗಲು ಆರಂಭಿಸಿದಾಗಿನಿಂದ ತಮ್ಮ ಸಮವಸ್ತ್ರದ ಭಾಗವಾಗಿ ತಿಲಕವನ್ನು ಧರಿಸಲು ಬಯಸಿದ್ದರು. ಅದರಂತೆ ಇದೀಗ ಅಮೆರಿಕ ಏರ್​ಫೋರ್ಸ್ ದರ್ಶನ್​ ಬಯಕೆಗೆ ಅಸ್ತು ಎಂದಿದೆ
ದರ್ಶನ್​ ಶಾ ವ್ಯೋಮಿಂಗ್​​ನಲ್ಲಿರುವ ಫ್ರಾನ್ಸಿಸ್​ ಇ ವಾರೆನ್​ ಏರ್​ಫೋರ್ಸ್ ಬೇಸ್​ನಲ್ಲಿ ಏರೋಸ್ಪೇಸ್​ ವೈದ್ಯಕೀಯ ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...