alex Certify ಅಮೆರಿಕದಲ್ಲಿ ಓಮಿಕ್ರಾನ್​​ ರೂಪಾಂತರಿಯಿಂದಾಗಿ ಉಂಟಾಗಿದೆ ಈ ಆಘಾತಕಾರಿ ಬೆಳವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ಓಮಿಕ್ರಾನ್​​ ರೂಪಾಂತರಿಯಿಂದಾಗಿ ಉಂಟಾಗಿದೆ ಈ ಆಘಾತಕಾರಿ ಬೆಳವಣಿಗೆ

ಕೊರೊನಾ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ಅಮೆರಿಕದಲ್ಲಿ 10 ದಶಲಕ್ಷಕ್ಕೂ ಅಧಿಕ ಮಕ್ಕಳು ಕೋವಿಡ್​ 19 ಸೋಂಕಿಗೆ ಒಳಗಾಗಿದ್ದಾರೆ ಎಂದು ಅಮೆರಿಕದ ಅಕಾಡೆಮಿ ಆಫ್​​ ಪೀಡಿಯಾಟ್ರಿಕ್ಸ್​ ಹಾಗೂ ಚಿಲ್ಡ್ರನ್​​ ಹಾಸ್ಪಿಟಲ್​ ಅಸೋಸಿಯೇಷನ್​ನ ಇತ್ತೀಚಿನ ವರದಿಯು ಹೇಳಿದೆ.

ಜನವರಿ 20ರ ವೇಳೆಗೆ ದೇಶದಲ್ಲಿ ಒಟ್ಟು 1,06,03,034 ಮಕ್ಕಳಿಗೆ ಕೋವಿಡ್​ ಸೋಂಕು ಧೃಡಪಟ್ಟಿದೆ. ಇನ್ನು ಸೋಮವಾರದಂದು ಬಂದ ವರದಿಯ ಪ್ರಕಾರ ಎಲ್ಲಾ ಧೃಡಪಟ್ಟ ಪ್ರಕರಣಗಳಲ್ಲಿ 18.4 ಪ್ರತಿಶತದಷ್ಟು ಮಕ್ಕಳೇ ಇದ್ದಾರೆ ಎನ್ನಲಾಗಿದೆ.

ಓಮಿಕ್ರಾನ್​ ರೂಪಾಂತರಿಯು ಆರಂಭವಾದ ಬಳಿಕ ಅಮೆರಿಕದಲ್ಲಿ ಮಕ್ಕಳಲ್ಲಿ ಗಣನೀಯ ಪ್ರಮಾಣದಲ್ಲಿ ಕೋವಿಡ್​ ಸೋಂಕು ಕಂಡುಬರುತ್ತಿದೆ. ಕಳೆದ ವಾರ 1.1 ಮಿಲಿಯನ್​ ಮಕ್ಕಳಲ್ಲಿ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಇದು ಕಳೆದ ಚಳಿಗಾಲಕ್ಕಿಂತ ಐದು ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...