alex Certify ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ ನಟಿ ಶಮಿತಾ ಶೆಟ್ಟಿ ಹೊಸ ಪೋಸ್ಟ್……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ ನಟಿ ಶಮಿತಾ ಶೆಟ್ಟಿ ಹೊಸ ಪೋಸ್ಟ್……!

ಬಿಗ್ ಬಾಸ್ ಸೀಸನ್-15 ಕಾರ್ಯಕ್ರಮದ ನಂತರ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಗಮನ ಸೆಳೆದಿದ್ದಾರೆ. ಶೋನಲ್ಲಿ ಅವರ ವ್ಯಕ್ತಿತ್ವದಿಂದಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಶಮಿತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಚಿತ್ರವು ಅವರ ಮುಂಬರುವ ಯೋಜನೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ.

ಚಿತ್ರದಲ್ಲಿ, ಶಮಿತಾ ಟ್ಯೂಬ್ ಟಾಪ್ ಅನ್ನು ಧರಿಸಿ, ಅದಕ್ಕೆ ಬಿಗಿಯುಡುಪುಗಳೊಂದಿಗೆ ಜೋಡಿಸಲಾದ ನೆಟೆಡ್ ಟಾಪ್ ಅನ್ನು ಧರಿಸಿದ್ದಾರೆ. ಕಾಲಿಗೆ ಕೆಂಪು ಬಣ್ಣದ ಬೂಟು ಅನ್ನು ಧರಿಸಿ, ಸುಂದರವಾಗಿ ಕಾಣುತ್ತಿದ್ದಾರೆ.

ಜೊತೆಗೆ ಶಮಿತಾ ಹೆಡ್‌ಫೋನ್‌ ಹಾಕಿಕೊಂಡಿದ್ದು, ವೇದಿಕೆಯಲ್ಲಿ ಮೈಕ್‌ ಮುಂದೆ ನಿಂತಿರುವುದನ್ನು ಫೋಟೋದಲ್ಲಿ ಗಮನಿಸಬಹುದು. ಹೃದಯದ ಎಮೋಜಿಯೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರ ಅಭಿಮಾನಿಗಳು ಆಕೆಯ ಕಾಮೆಂಟ್‌ ವಿಭಾಗವನ್ನು ತುಂಬಿದ್ದಾರೆ. ಶಮಿತಾರ ಮುಂಬರುವ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಮುಂದಿನ ಯೋಜನೆ ಏನೆಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಶಮಿತಾ ಶೆಟ್ಟಿ ತಮ್ಮ ಗೆಳೆಯ ರಾಕೇಶ್ ಬಾಪಟ್ ಹಾಗೂ ತಮ್ಮ ಕುಟುಂಬದೊಂದಿಗೆ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ ಅವರ ಅಭಿಮಾನಿಗಳು ಒಳ್ಳೆಯ ಸುದ್ದಿಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಶಮಿತಾ ಪುಣೆಯಲ್ಲಿ ರಾಕೇಶ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿದ್ದು, ಅವರೊಂದಿಗೆ ಸಮಯವನ್ನು ಕಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...