alex Certify ಅಪ್ಪನ ಜೇಬಿನಿಂದ 50 ರೂ. ತೆಗೆದ ಮಗ; ಕೊಲೆ ಮಾಡಿದ ತಂದೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನ ಜೇಬಿನಿಂದ 50 ರೂ. ತೆಗೆದ ಮಗ; ಕೊಲೆ ಮಾಡಿದ ತಂದೆ..!

ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದಿದ್ದಾನೆ ಎಂಬ ಕಾರಣಕ್ಕೆ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮಗನು ತಮ್ಮ ಜೇಬಿಗೆ ಕೈ ಹಾಕಿ 50 ರೂಪಾಯಿ ತೆಗೆದುಕೊಂಡಿದ್ದಾನೆ ಎಂಬ ಕಾರಣಕ್ಕೆ ತಂದೆಯು ಹಿಗ್ಗಾಮುಗ್ಗ ಥಳಿಸಿದ್ದಾನೆ. ಅಕ್ಕ-ಪಕ್ಕದ ಜನರು ಎಷ್ಟೇ ಬುದ್ಧಿ ಹೇಳಿದರೂ ತಂದೆ ಮಾತ್ರ ಕೋಪದಲ್ಲಿ ಮಗನಿಗೆ ಮನಬಂದಂತೆ ಥಳಿಸಿ ಬಿಟ್ಟಿದ್ದಾನೆ.

ಒಮಿಕ್ರಾನ್ ಭೀತಿ, ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

ಆ ನಂತರ ಪೊಲೀಸರಿಗೆ ಮಾಹಿತಿ ನೀಡಿದ ನೆರೆ ಹೊರೆಯವರು, ಸಹಾಯ ಕೋರಿದ್ದಾರೆ. ಕೂಡಲೇ ಆಗಮಿಸಿದ ಪೊಲೀಸರು, ಮಗನನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲು ಮುಂದಾಗಿದ್ದಾರೆ. ಅಷ್ಟರಲ್ಲಿಯೇ ಮಗ ಸಾವನ್ನಪ್ಪಿದ್ದು, ಪೊಲೀಸರು ತಂದೆಯ ವಿರುದ್ಧ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.

ಥಾಣೆಯ ವಗೋಭಾ ನಗರದ ನಿವಾಸಿ ಸಂದೀಪ್ ಮಗನನ್ನೇ ಕೊಲೆ ಮಾಡಿದ ಕ್ರೂರ ತಂದೆ. ಮಗ ಕದ್ದಿದ್ದಕ್ಕೆ ಬುದ್ಧಿ ಹೇಳುವುದನ್ನು ಬಿಟ್ಟು ಮನಸೋ ಇಚ್ಛೆ ಥಳಿಸಿ ತಾನು ಹೆತ್ತ ಕುಡಿಯೇ ಸಾಯುವಂತೆ ಮಾಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...