ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಚಿಂತಿಸದೇ ಅಪ್ಘಾನ್ ಮಹಿಳೆಯರಿಗಾಗುತ್ತಿರುವ ಅನ್ಯಾಯದ ಬಗ್ಗೆ ಹೇಳಿಕೆ ನೀಡುತ್ತಿರುವುದು ಯಾವ ನ್ಯಾಯ ಎಂದು ಕಿಡಿಕಾರಿದ್ದ ಅಸಾದುದ್ದೀನ್ ಓವೈಸಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಓವೈಸಿಯನ್ನು ಮೊದಲು ಅಪ್ಘಾನ್ ಗೆ ಕಳುಹಿಸಬೇಕು ಎಂದಿದ್ದಾರೆ.
ಓವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕರಂದ್ಲಾಜೆ, ಮುಸ್ಲೀಂ ಮಹಿಳೆಯರ ರಕ್ಷಣೆಗಾಗಿ ಅಸಾದುದ್ದೀನ್ ಓವೈಸಿಯನ್ನು ಮೊದಲು ಅಪ್ಘಾನಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ: ಮಕ್ಕಳಿಂದ ಅತಿ ವೇಗದಲ್ಲಿ ಹರಡುತ್ತೆ ಸೋಂಕು
ತಾಲಿಬಾನಿಗಳ ಷರಿಯಾ ಕಾನೂನು, ಮಹಿಳೆಯರಿಗೆ ಅದರಿಂದಾಗುವ ಹಿಂಸೆ ಬಗ್ಗೆ ಗೊತ್ತಿದ್ದರೂ ಅಪ್ಘಾನ್ ಮಹಿಳೆಯರ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರ ಕಾಳಜಿ ತೋರಿದ್ದನ್ನು ಲೇವಡಿ ಮಾಡಿರುವ ಓವೈಸಿ ಭಾರತದಲ್ಲಿ ಮಹಿಳೆಯರ ಮೇಲೆ ಪ್ರತಿದಿನ ದೌಜನ್ಯ ನಡೆಯುತ್ತಿದ್ದರೂ ಇದನ್ನು ತಡೆಯುವ ಬಗ್ಗೆ ಚಿಂತನೆ ನಡೆಸದೇ ಅಪ್ಘಾನ್ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವುದು ಅನ್ಯಾಯ, ದೌರ್ಜನ್ಯಗಳಲ್ಲವೇ ಎಂದು ಪ್ರಶ್ನಿಸಿದ್ದರು.
ಈ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿರುವ ಶೋಭಾ ಕರಂದ್ಲಾಜೆ, ತಮ್ಮ ಸಮುದಾಯದ ಮಹಿಳೆಯರ ರಕ್ಷಣೆಗಾಗಿ ಓವೈಸಿಯವರನ್ನು ಅಪ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ ಎಂದು ಹೇಳಿದ್ದಾರೆ.