alex Certify ಕೊರೊನಾ ಮೂರನೇ ಅಲೆ: ಮಕ್ಕಳಿಂದ ಅತಿ ವೇಗದಲ್ಲಿ ಹರಡುತ್ತೆ ಸೋಂಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮೂರನೇ ಅಲೆ: ಮಕ್ಕಳಿಂದ ಅತಿ ವೇಗದಲ್ಲಿ ಹರಡುತ್ತೆ ಸೋಂಕು

ಕೊರೊನಾ ವೈರಸ್ ಹೊಸ ರೂಪಾಂತರವು ಮೂರನೇ ಅಲೆ ಅಪಾಯವನ್ನು ಹೆಚ್ಚಿಸಿದೆ. ಮಕ್ಕಳಿಗೆ ಇನ್ನೂ ಲಸಿಕೆ ಹಾಕದ ಕಾರಣ, ಮೂರನೇ ಅಲೆ ಸಮಯದಲ್ಲಿ ಸೋಂಕು, ಮಕ್ಕಳಿಗೆ ಹರಡುವ ಅಪಾಯ ಹೆಚ್ಚಿರಲಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ವೈರಸ್, ಮಕ್ಕಳಿಂದ ಇತರರಿಗೆ ಹರಡುವ ಅಪಾಯ ಎಷ್ಟು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡ್ತಿದೆ. ಇತ್ತೀಚಿಗೆ ನಡೆದ ಅಧ್ಯಯನವೊಂದು ಮಹತ್ವದ ವಿಷಯ ಬಹಿರಂಗಪಡಿಸಿದೆ. ಕೆನಡಿಯನ್ ಪಬ್ಲಿಕ್ ಹೆಲ್ತ್ ಏಜೆನ್ಸಿ ನಡೆಸಿದ ಅಧ್ಯಯನದಲ್ಲಿ, ಹದಿಹರೆಯದವರಿಗಿಂತ ಶಿಶುಗಳಿಂದ ಮತ್ತು ಮಕ್ಕಳಿಂದ ಕೊರೊನಾ ಸೋಂಕು ಹೆಚ್ಚು ಹರಡುವ ಅಪಾಯವಿದೆ ಎಂಬ ವಿಷ್ಯ ಹೊರಬಿದ್ದಿದೆ.

ಸೋಂಕಿತ ಮಕ್ಕಳು, ಸೋಂಕಿನ ವಾಹಕಗಳಾಗಿರಬಹುದು. ಅವರು, ಕುಟುಂಬದ ಇತರ ಸದಸ್ಯರಿಗೆ ಸೋಂಕನ್ನು ವೇಗವಾಗಿ ಹರಡಬಹುದು ಎಂದು ತಜ್ಞರು ಹೇಳಿದ್ದಾರೆ. ಮಕ್ಕಳಿಂದ ಸೋಂಕು ಹರಡಲು ಮುಖ್ಯ ಕಾರಣ, ಮಕ್ಕಳ ಪಾಲನೆ. ಸಾಮಾನ್ಯವಾಗಿ ಮಕ್ಕಳನ್ನು ಪಾಲಕರು ನೋಡಿಕೊಳ್ಳಬೇಕಾಗುತ್ತದೆ. ಅವರ ಕೆಲಸವನ್ನು ಅವರು ಮಾಡಿಕೊಳ್ಳುವುದಿಲ್ಲ. ಹಾಗೆ ಅವರನ್ನು ಕ್ವಾರಂಟೈನ್ ಮಾಡುವುದು ಕಷ್ಟ. ಮಕ್ಕಳನ್ನು ಆರೈಕೆ ಮಾಡುವ ಪಾಲಕರಿಗೆ ಬೇಗ ಸೋಂಕು ಹರಡುವ ಅಪಾಯವಿದೆ.

ಮಕ್ಕಳಲ್ಲಿ ವಿಶೇಷವಾಗಿ 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚು ಸೋಂಕು ಹರಡಲಿದ್ದಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ. ಇದರಿಂದ ರಕ್ಷಣೆ ಬೇಕೆಂದ್ರೆ, ಮಕ್ಕಳಲ್ಲಿ ಯಾವುದೇ ಲಕ್ಷಣ ಕಂಡು ಬಂದ್ರೂ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡಿ ಹೋಗಿ. ಮನೆಯಲ್ಲಿ ಪಾಲಕರು ಮಾಸ್ಕ್ ಕಡ್ಡಾಯವಾಗಿ ಧರಿಸಿ. ಮನೆಯಲ್ಲಿರುವ ಹಿರಿಯರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...