alex Certify ‘ಅಪಘಾತ’ ನಡೆದ ಬರೋಬ್ಬರಿ 9 ವರ್ಷದ ನಂತರ ದಾಖಲಾಯ್ತು ದೂರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಪಘಾತ’ ನಡೆದ ಬರೋಬ್ಬರಿ 9 ವರ್ಷದ ನಂತರ ದಾಖಲಾಯ್ತು ದೂರು…!

ಅಪಘಾತ ನಡೆದ ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ದೂರು ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಂತ್ರಸ್ತ ಬಾಲಕನ ತಂದೆ ನ್ಯಾಯಾಲಯದ ಮೂಲಕ ಈಗ ವೈಯಕ್ತಿಕ ದೂರು ದಾಖಲಿಸಿದ್ದಾರೆ.

2012ರ ಮೇ 22ರಂದು ಆನಂದಪುರಂನ ಮುಖ್ಯರಸ್ತೆಯಲ್ಲಿ ನಾಲ್ಕು ವರ್ಷದ ಬಾಲಕ ದರ್ಶನ್ ತನ್ನ ಅಜ್ಜ ಚೌಡಪ್ಪ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಗಂಭೀರವಾಗಿ ಗಾಯಗೊಂಡಿದ್ದ.

ಈತನಿಗೆ ಆನಂದಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಪೊಲೀಸರು ಭೇಟಿ ನೀಡಿ ಹೇಳಿಕೆ ಪಡೆದುಕೊಂಡಿದ್ದರು. ಆದರೆ ಆ ಬಳಿಕ ಪ್ರಕರಣ ಏನಾಯ್ತು ಎಂಬುದರ ಯಾವುದೇ ಅರಿವು ಬಾಲಕನ ಕುಟುಂಬಕ್ಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕ ದರ್ಶನ್ ತಂದೆ ಮಂಜುನಾಥ ನ್ಯಾಯಾಲಯದ ಮುಖಾಂತರ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...