alex Certify ಅಪಘಾತವಾದ ಟ್ರಕ್‍ನಲ್ಲಿದ್ದ ಸಾಮಾಗ್ರಿಗಳನ್ನು ಕದ್ದೊಯ್ದ ಸ್ಥಳೀಯರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತವಾದ ಟ್ರಕ್‍ನಲ್ಲಿದ್ದ ಸಾಮಾಗ್ರಿಗಳನ್ನು ಕದ್ದೊಯ್ದ ಸ್ಥಳೀಯರು: ವಿಡಿಯೋ ವೈರಲ್

ಟ್ರಕ್‍ವೊಂದು ಮತ್ತೊಂದು ಭಾರಿ ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಚಾಲಕ ತೀವ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಗ್ರಾಮಸ್ಥರು ನಾಮುಂದು ತಾಮುಂದು ಅಂತಾ ಧಾವಿಸಿ ತಮ್ಮ ಕೈಗೆ ಸಿಗುವ ಆಹಾರ ಪದಾರ್ಥಗಳ ಚೀಲಗಳೊಂದಿಗೆ ಓಡಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸ್ಥಳೀಯರು, ಅಪಘಾತಕ್ಕೀಡಾದ ಟ್ರಕ್‌ಗಳಲ್ಲಿ ಆಹಾರ ಪದಾರ್ಥಗಳಿದ್ದ ಗೋಣಿಚೀಲಗಳನ್ನು ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವರದಿಗಳ ಪ್ರಕಾರ, ಗ್ರಾಮಸ್ಥರು ಲಾರಿಯಿಂದ 900ಕ್ಕೂ ಹೆಚ್ಚು ಗೋಣಿಚೀಲಗಳನ್ನು ತೆಗೆದುಕೊಂಡು ಹೋಗಿದ್ದಾರೆ. ವಿಡಿಯೋದಲ್ಲಿ, ಕೆಲವರು ಟ್ರಕ್‌ನ ಮೇಲಿಂದ ಚೀಲಗಳನ್ನು ಎಸೆಯುತ್ತಿರುವುದು ಕಂಡುಬಂದರೆ, ಇತರರು ಅವುಗಳನ್ನು ರಸ್ತೆಯಿಂದ ಎತ್ತಿಕೊಂಡು ಹಳ್ಳಿ ಅಥವಾ ಮಾರುಕಟ್ಟೆಗಳತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿದೆ.

ಕಳ್ಳತನವಾಗಿರುವ ವರದಿಗಳು ಬೆಳಕಿಗೆ ಬರುತ್ತಿದ್ದಂತೆ, ಟ್ರಕ್‌ಗಳ ಮಾಲೀಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಕಳ್ಳತನ ಮತ್ತು ಅಪಘಾತದ ಪ್ರಕರಣವನ್ನು ದಾಖಲಿಸಲಾಗಿದ್ದು, ಕದ್ದ ಎಲ್ಲಾ ವಸ್ತುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

— ANI MP/CG/Rajasthan (@ANI_MP_CG_RJ) May 27, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...