alex Certify ಅನಗತ್ಯ ಗರ್ಭಧಾರಣೆ ತಡೆಯಲು ಮಹಿಳೆಯರು ಸೇವಿಸುವ ಔಷಧ ಹೆಚ್ಚಿಸುತ್ತೆ ಸ್ತನ ಕ್ಯಾನ್ಸರ್ ಅಪಾಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಗತ್ಯ ಗರ್ಭಧಾರಣೆ ತಡೆಯಲು ಮಹಿಳೆಯರು ಸೇವಿಸುವ ಔಷಧ ಹೆಚ್ಚಿಸುತ್ತೆ ಸ್ತನ ಕ್ಯಾನ್ಸರ್ ಅಪಾಯ…..!

ಅಸುರಕ್ಷಿತ ಲೈಂಗಿಕತೆಯಿಂದ ಅನೇಕರು ಗರ್ಭಧರಿಸುವ ಸಾಧ್ಯತೆ ಹೊಂದಿರುತ್ತಾರೆ. ಈ ಬಗ್ಗೆ ಮಹಿಳೆಯರು ಯಾವಾಗಲೂ ಚಿಂತಿತರಾಗುತ್ತಾರೆ. ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಯಲು ಗರ್ಭನಿರೋಧಕ ಔಷಧವನ್ನು ಸೇವಿಸುತ್ತಾರೆ. ಆದರೆ ಗರ್ಭನಿರೋಧಕ ಮಾತ್ರೆಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದ ಪ್ರಕಾರ ಎಲ್ಲಾ ಹಾರ್ಮೋನ್ ಗರ್ಭನಿರೋಧಕಗಳ ಬಳಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.

1996-2017ರ ಅವಧಿಯಲ್ಲಿ ಸ್ತನ ಕ್ಯಾನ್ಸರ್ ರೋಗನಿರ್ಣಯ ಮಾಡಿದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 9,498 ಮಹಿಳೆಯರನ್ನು ವಿಶ್ಲೇಷಿಸಲಾಗಿದೆ. ಒಟ್ಟು 18,171 ಕೇಸ್‌ ಸ್ಟಡಿ ಬಳಿಕ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ.  ಸ್ತನ ಕ್ಯಾನ್ಸರ್ ಹೊಂದಿರುವ 44 ಪ್ರತಿಶತ ಮಹಿಳೆಯರು, ಹಾರ್ಮೋನ್ ನಿಯಂತ್ರಕಗಳು ಮತ್ತು ಗರ್ಭನಿರೋಧಕಗಳ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಅವುಗಳಲ್ಲಿ ಅರ್ಧದಷ್ಟು ಪ್ರೊಜೆಸ್ಟೋಜೆನ್ ಮಾತ್ರೆಗಳಾಗಿವೆ. ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುವುದರಿಂದ ಇತರ ಅನಾನುಕೂಲಗಳೂ ಇವೆ.

ದುರ್ಬಲ ಇಮ್ಯೂನಿಟಿ : ಕೆಲವು ಗರ್ಭನಿರೋಧಕ ಮಾತ್ರೆಗಳು ಅಂಡಾಶಯದ ಕಾರ್ಯವನ್ನು ಕಡಿಮೆ ಮಾಡುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ತೂಕ ಹೆಚ್ಚಳ: ಕೆಲವು ಗರ್ಭನಿರೋಧಕ ಮಾತ್ರೆಗಳು ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಮಹಿಳೆಯರ ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ತೀವ್ರ ರಕ್ತದೊತ್ತಡ : ಕೆಲವು ಜನನ ನಿಯಂತ್ರಣ ಮಾತ್ರೆಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಅಧಿಕ ಬಿಪಿ ಸಂಬಂಧಿತ ಸಮಸ್ಯೆಗಳಿರುವವರಿಗೆ ಮತ್ತಷ್ಟು ಅಪಾಯಕಾರಿಯಾಗಿದೆ.

ಹೃದಯ ಸಂಬಂಧಿ ಸಮಸ್ಯೆ : ಕೆಲವು ಜನನ ನಿಯಂತ್ರಣ ಮಾತ್ರೆಗಳು ಹೃದಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಹಾಗಾಗಿ ಅವುಗಳ ಸೇವನೆಗೂ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಸೋಂಕು: ಗರ್ಭನಿರೋಧಕ ಮಾತ್ರೆಗಳನ್ನು ಅತಿಯಾಗಿ ಬಳಸಿದರೆ ಸೋಂಕಿಗೆ ತುತ್ತಾಗಬಹುದು.

ಸ್ತನ ಕ್ಯಾನ್ಸರ್ ಲಕ್ಷಣಗಳು

ಸ್ತನಗಳಲ್ಲಿ ಉಂಡೆಗಳು ಅಥವಾ ವಿವರಿಸಲಾಗದ ಊತ.

ಸ್ತನಗಳ ಗಾತ್ರದಲ್ಲಿ ಬದಲಾವಣೆಗಳು ಅಥವಾ ಸಾಮಾನ್ಯಕ್ಕಿಂತ ದೊಡ್ಡದಾಗಿರುತ್ತವೆ ಅಥವಾ ಚಿಕ್ಕದಾಗಿರುತ್ತವೆ.

ಸ್ತನಗಳಲ್ಲಿ ನೋವು ಅಥವಾ ಒತ್ತಡದ ಭಾವನೆ.

ಸ್ತನಗಳಲ್ಲಿ ಉಂಡೆಗಳಂತೆ ಕಾಣುವ ಅಥವಾ ಹೆಬ್ಬೆರಳಿನ ಉಂಡೆಗಳಂತೆ ಭಾಸವಾಗುವ ಕಲೆಗಳು.

ಸ್ತನಗಳ ಚರ್ಮದಲ್ಲಿ ಕೆಂಪನೆಯ ಗುರುತು, ಒರಟಾದ ಅಥವಾ ಊದಿಕೊಂಡ ಗುರುತುಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...