alex Certify ಅಧಿಕ ಹಣ ವ್ಯಯಿಸಿ ಮೆನಿಕ್ಯೂರ್​ ಮಾಡಿಸಿಕೊಂಡು ಪೇಚಿಗೆ ಸಿಲುಕಿದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕ ಹಣ ವ್ಯಯಿಸಿ ಮೆನಿಕ್ಯೂರ್​ ಮಾಡಿಸಿಕೊಂಡು ಪೇಚಿಗೆ ಸಿಲುಕಿದ ಮಹಿಳೆ..!

ಕೆಲಸದ ಒತ್ತಡಗಳೆನ್ನಲ್ಲ ಬದಿಗೊತ್ತಿ ಸಲೂನ್​ಗೆ ಹೋಗುವುದು ಅನೇಕರಿಗೆ ವಿಶ್ರಾಂತಿ ನೀಡುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ರಿಲೀಫ್​ ಸಿಗಲೆಂದು ಸಲೂನ್​ಗೆ ತೆರಳಲು ಹೋಗಿ ಹಣ ವ್ಯಯ ಮಾಡಿಕೊಂಡು ಬಂದಿದ್ದಾರೆ.

ಅಮೆರಿಕದ ಜಾರ್ಜಿಯಾದ ರೋಸ್​ವೆಲ್​ನ ನಿವಾಸಿಯಾದ ಎಲ್ಲೇರಿ ಕ್ರುಟ್​ ಟಿಕ್​ಟಾಕ್​ನಲ್ಲಿ ತಮಗೆ ಸಲೋನ್​ನಲ್ಲಿ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಅತ್ಯಂತ ಸುಂದರವಾಗಿ ಮೆನಿಕ್ಯೂರ್​ ಮಾಡಲಾದ ಕೈಗಳ ಫೋಟೋವೊಂದನ್ನು ಟಿಕ್​ಟಾಕ್​​ನಿಂದ ಡೌನ್​ಲೋಡ್​ ಮಾಡಿಕೊಂಡಿದ್ದ ಎಲ್ಲೇರಿ ಇದೇ ರೀತಿ ತಮ್ಮ ಕೈ ಬೆರಳುಗಳನ್ನೂ ಸಿಂಗರಿಸಿಕೊಳ್ಳಬೇಕು ಎಂದು ಸಲೂನ್​ಗೆ ತೆರಳಿದ್ದರು. ಬಾದಾಮಿ ಆಕಾರದ ಉಗುರಿಗೆ ಪಾರದರ್ಶಕ ಬೇಸ್​ ಹಾಗೂ ನೀಲಿ ಬಣ್ಣದ ಗೆರೆಗಳ ಮೂಲಕ ಸಿಂಗರಿಸಲಾಗಿತ್ತು.

ಇದೇ ರೀತಿಯ ಉಗುರುಗಳನ್ನು ಮಾಡಿಕೊಳ್ಳಲು ಎಲ್ಲೇರಿ ಸಲೂನ್​ನಲ್ಲಿ 3700 ರೂಪಾಯಿಗಳನ್ನು ಪಾವತಿಸಿದ್ದರು. ಆದರೆ ಸಲೂನ್​ನಲ್ಲಿ ಮಾಡಿದ ಉಗುರುಗಳು ಅತ್ಯಂತ ಅಸಹ್ಯವಾಗಿ ಮೂಡಿಬಂದಿದೆ. ಎಲ್ಲೇರಿ ಕೈ ಉಗುರುಗಳನ್ನು ಆ ಫೋಟೋಗೆ ಸಂಬಂಧವೇ ಇಲ್ಲ ಎಂಬಂತೆ ಅತ್ಯಂತ ಕಳಪೆ ರೀತಿಯಲ್ಲಿ ಮೆನಿಕ್ಯೂರ್​ ಮಾಡಲಾಗಿತ್ತು.

ತನ್ನ ಕೈ ಬೆರೆಳುಗಳು ಫೋಟೋವನ್ನು ಟಿಕ್​ಟಾಕ್​ನಲ್ಲಿ ಎಲ್ಲೇರಿ ಶೇರ್​ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರೂ ಕೂಡ ಎಲ್ಲೇರಿಯ ಕೈ ಬೆರಳುಗಳ ಅಂದ ಕೆಡಿಸಿದ ಸಲೂನ್​ಗೆ ಹಿಡಿಶಾಪ​ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...