alex Certify ಅದ್ಭುತ ಗುಣಗಳ ಆಗರ ʼಮೆಂತ್ಯʼ ಸೊಪ್ಪುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಭುತ ಗುಣಗಳ ಆಗರ ʼಮೆಂತ್ಯʼ ಸೊಪ್ಪುʼ

ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ.

ಮಧುಮೇಹ

ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು.

ಕೊಲೆಸ್ಟ್ರಾಲ್

ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಒಳ್ಳೆಯ ಕೊಬ್ಬಿನಂಶ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.

ಎದೆ ಹಾಲು ಹೆಚ್ಚಿಸಲು

ಕೆಲವು ತಾಯಂದಿರಿಗೆ ಎದೆ ಹಾಲು ಉತ್ಪತ್ತಿಯಾಗದೇ ಮಗುವಿಗೆ ಸಾಕಷ್ಟು ಹಾಲುಣಿಸಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅಂತಹ ಮೆಂತ್ಯ ಸೊಪ್ಪನ್ನು ತರಕಾರಿ ರೂಪದಲ್ಲಿ ಅಥವಾ ಹರ್ಬಲ್ ಟೀ ರೂಪದಲ್ಲಿ ಸೇವಿಸುವುದರಿಂದ ಎದೆ ಹಾಲು ಹೆಚ್ಚುವುದು.

ಪುರುಷರ ಲೈಂಗಿಕತೆ

ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...