alex Certify ಅದೃಷ್ಟ ಅಂದರೆ ಇದು: ಬರೋಬ್ಬರಿ 7.5 ಕೋಟಿ ರೂಪಾಯಿ ಲಾಟರಿ ಗೆದ್ದ ಟ್ರಕ್​ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದರೆ ಇದು: ಬರೋಬ್ಬರಿ 7.5 ಕೋಟಿ ರೂಪಾಯಿ ಲಾಟರಿ ಗೆದ್ದ ಟ್ರಕ್​ ಚಾಲಕ

ಅಮೆರಿಕದ ಟ್ರಕ್​ ಚಾಲಕರೊಬ್ಬರು ಲಾಟರಿ ಟಿಕೆಟ್​ ಮೂಲಕ ಬರೋಬ್ಬರಿ 7.5 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದ್ದಾರೆ. ಇಲಿನಾಯ್ಸ್​ನ ನಿವಾಸಿಯಾಗಿರುವ 48 ವರ್ಷದ ಚಾಲಕ ಮಿಚಿಗನ್​ನಿಂದ ಹಾದು ಹೋಗುವ ಸಂದರ್ಭದಲ್ಲಿ ಮತ್ತವಾನ್​ ಗ್ಯಾಸ್​ ಸ್ಟೇಷನ್​ನಲ್ಲಿ ಲಾಟರಿ ಟಿಕೆಟ್​ ಖರೀದಿಸಿದ್ದರು.

ನಾನು ಬಾರ್​ ಕೋಡ್​ ಸ್ಕ್ರ್ಯಾಚ್​ ಮಾಡಿದ್ದೆ. ಟಿಕೆಟ್​ ಸ್ಕ್ಯಾನ್​ ಮಾಡಿದಾಗ ನನಗೆ 1 ಮಿಲಿಯನ್​ ಡಾಲರ್​ ಜಾಕ್​ಪಾಟ್​ ಹೊಡೆದಿದೆ ಎಂಬ ಸಂದೇಶ ಬಂತು. ಎಂದು ಚಾಲಕ ಹೇಳಿದ್ದಾರೆ.

ನನಗೆ ಸಣ್ಣ ಮೊತ್ತ ಲಭಿಸಿರಬಹುದು ಎಂದೇ ನಾನು ಊಹಿಸಿದ್ದೆ. ನಾನು 1 ಮಿಲಿಯನ್​ ಡಾಲರ್​ ಹಣವನ್ನು ಗೆದ್ದಿದ್ದೇನೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಟ್ರಕ್​ ಚಾಲಕ ಹೇಳಿದ್ದಾರೆ. ತನ್ನ ಹೆಸರನ್ನು ಬಹಿರಂಗಪಡಿಸಲು ಟ್ರಕ್​ ಚಾಲಕ ನಿರಾಕರಿಸಿದ್ದಾರೆ.

ಟ್ರಕ್​ ಚಾಲಕನಿಗೆ 6,93,000 ಡಾಲರ್​ ಹಣ ಸಿಕ್ಕಿದೆ. ಈ ಹಣದಲ್ಲಿ ಹೊಸ ಟ್ರಕ್​ ಖರೀದಿ ಮಾಡಬೇಕು ಎಂಬುದು ಇವರ ಇರಾದೆಯಾಗಿದೆ. ಅಲ್ಲದೇ ಭವಿಷ್ಯಕ್ಕೆಂದು ಸ್ವಲ್ಪ ಹಣವನ್ನು ಎತ್ತಿಡುವುದಾಗಿ ಟ್ರಕ್​ ಚಾಲಕ ಹೇಳಿದ್ದಾರೆ.

ಈ ರೀತಿ ಅಚ್ಚರಿ ಎಂಬಂತೆ ಸಾಮಾನ್ಯ ವ್ಯಕ್ತಿಗಳು ಲಾಟರಿ ಗೆದ್ದ ಸಾಕಷ್ಟು ಉದಾಹರಣೆಗಳಿವೆ. ಕಳೆದ ತಿಂಗಳು ಅಮೆರಿಕದಲ್ಲಿ ವ್ಯಕ್ತಿಯೊಬ್ಬರು 4.5 ಕೋಟಿ ರೂಪಾಯಿ ಲಾಟರಿ ಗಳಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...