alex Certify ಅತ್ಯದ್ಭುತ ನೃತ್ಯದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಗಗನಸಖಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯದ್ಭುತ ನೃತ್ಯದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಗಗನಸಖಿ..!

ಪ್ರಯಾಣಿಕರಿಲ್ಲದ ವಿಮಾನದಲ್ಲಿ ʼಮನಿಕೆ ಮಾಗೆ ಹಿತೆʼ ಹಾಡಿಗೆ ನೃತ್ಯ ಮಾಡಿ ಇಂಡಿಗೋ ಗಗನಸಖಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ನಿಮಗೆ ನೆನಪಿರಬಹುದು.

ಇದಾದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಗಗನಸಖಿಯರು ಇದೇ ರೀತಿ ವಿಮಾನದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋಗಳು ರೌಂಡ್ಸ್​ ಹಾಕಿದ್ದವು.

ಈಗಾಗಲೇ ಸಾಕಷ್ಟು ಭಾರಿ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನೃತ್ಯದಿಂದಲೇ ವೈರಲ್​ ಆಗಿರುವ ಸ್ಪೈಸ್​ಜೆಟ್​ ಗಗನಸಖಿ ಉಮಾ ಮೀನಾಕ್ಷಿ ಈ ಬಾರಿ ಇನ್​​ಸ್ಟಾಗ್ರಾಂನಲ್ಲಿ ಪ್ರಸ್ತುತ ವೈರಲ್​ ಇರುವ ಕೇಂದಿ ಹುಂಡಿ ಸಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋದಲ್ಲಿ ಉಮಾ ಮೀನಾಕ್ಷಿ ಏರ್​ಪೋರ್ಟ್​ನಲ್ಲಿ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕಿದ್ದಾರೆ. ಕೆಂಪು ಬಣ್ಣದ ಸಮವಸ್ತ್ರ ತೊಟ್ಟಿರುವ ಉಮಾ ಮೀನಾಕ್ಷಿ ಈ ರ್ಯಾಪ್​ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಅತ್ಯಂತ ಕಡಿಮೆ ಸಮಯದಲ್ಲಿಯೇ ಈ ವಿಡಿಯೋ ವೈರಲ್​ ಆಗಿದ್ದು 1.3 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ನೆಟ್ಟಿಗರು ಉಮಾ ಮೀನಾಕ್ಷಿಯ ನೃತ್ಯಕ್ಕೆ ಮಾರು ಹೋಗಿದ್ದಾರೆ. ಕಮೆಂಟ್​ನಲ್ಲೂ ಸಹ ಉಮಾ ಮೀನಾಕ್ಷಿಯವರನ್ನು ನೆಟ್ಟಿಗರು ಹಾಡಿ ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...