alex Certify ಅತ್ಯಂತ ಕಿರಿಯ ಶ್ರೀಮಂತರ ಪಟ್ಟಿ ಸೇರಿದ ಬೆಂಗಳೂರಿನ ಕೈವಲ್ಯ ವೋಹ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ಕಿರಿಯ ಶ್ರೀಮಂತರ ಪಟ್ಟಿ ಸೇರಿದ ಬೆಂಗಳೂರಿನ ಕೈವಲ್ಯ ವೋಹ್ರಾ

ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ 2022 ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಅದಾನಿ ಸಮೂಹದ ಸಂಸ್ಥಾಪಕ ಗೌತಮ್ ಅದಾನಿ ಈವರೆಗೆ ಭಾರತದ ಅತಿ ದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿದ್ದ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಅವರನ್ನು ಹಿಂದಕ್ಕಿ ಮೊದಲ ಸ್ಥಾನ ಗಳಿಸಿದ್ದಾರೆ.

ಇನ್ನು ಅತ್ಯಂತ ಕಿರಿಯ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿನ 19 ವರ್ಷದ ಕೈವಲ್ಯ ವೋಹ್ರಾ ಹಾಗೂ ಅವರ ಪಾಲುದಾರ ಅದಿತ್ ಪಲೀಚಾ ಸೇರಿದ್ದಾರೆ. ಇವರಿಬ್ಬರೂ ದಿನಸಿ ವಸ್ತುಗಳ ಆನ್ಲೈನ್ ಫ್ಲ್ಯಾಟ್ ಫಾರ್ಮ್ ಝೆಪ್ಟೋ ಸಂಸ್ಥಾಪಕರಾಗಿದ್ದಾರೆ.

ಇನ್ನು ಭಾರತದ ಶ್ರೀಮಂತ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಪಾತ್ರರಾಗಿದ್ದು, ಇವರು ಬಯೋಟೆಕ್ ಸಂಸ್ಥಾಪಕಿ ಕಿರಣ್ ಮಜಮ್ದಾರ್ ಶಾ ಅವರನ್ನು ಹಿಂದಿಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...