alex Certify ಅಡುಗೆ ಅನಿಲ ದುರಂತ; ಗಾಯಗೊಂಡಿದ್ದ ಮೂವರ ದುರ್ಮರಣ; ಅನಾಥವಾದ ಮೂರು ತಿಂಗಳ ಕಂದಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಅನಿಲ ದುರಂತ; ಗಾಯಗೊಂಡಿದ್ದ ಮೂವರ ದುರ್ಮರಣ; ಅನಾಥವಾದ ಮೂರು ತಿಂಗಳ ಕಂದಮ್ಮ

ಗದಗ: ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೇ ಸಾವನ್ನಪಿರುವ ಘಟನೆ ಗದಗ ಜಿಲ್ಲೆಯ ಮುಳಗುಂದದ ಚಿಂದಿಪೇಟೆಯಲ್ಲಿ ನಡೆದಿದೆ.

ಜನವರಿ 26ರಂದು ಸಂಭವಿಸಿದ್ದ ದುರಂತದಲ್ಲಿ ಬಸವಣ್ಣಪ್ಪ ಹಡಪದ, ಬಾಲಕ ಆದರ್ಶ ಹಾಗೂ ಆತನ ತಾಯಿ ಬಾಣಂತಿ ಯಶೋಧಾ ಬೆಂತೂರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೂವರು ಸಾವನ್ನಪ್ಪಿದ್ದಾರೆ.

ಮೃತ ಮಹಿಳೆ ಯಶೋಧಾಗೆ ಮೂರು ತಿಂಗಳ ಮಗುವಿದ್ದು, ಘಟನೆಯಲ್ಲಿ ಮಗು ಪ್ರಾಣಾಪಾಯದಿಮ್ದ ಪಾರಾಗಿದೆ. ಆದರೆ ಮೂರು ತಿಂಗಳ ಮಗು ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡು ತಬ್ಬಲಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...